ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಇಂಜಿನಿಯರ್​​

WEB
Published on

ಚಿಕ್ಕನಾಯಕನಹಳ್ಳಿ: ಸರ್ಕಾರದ ಮಹಾತ್ವಾಕಾಂಕ್ಷಿ ಜಲ್​ಜೀವನ್​ ಮಿಷನ್​(ಜೆಜೆಎಂ) ಕಾಮಗಾರಿಗೆ ಸಂಬಂಧಿಸಿದಂತೆ ಬಿಲ್​ ಮಾಡಿಕೊಡಲು ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆಯಿಟ್ಟು ಹಣ ಸ್ವೀಕರಿಸುವಾಗ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಇಲಾಖೆಯ ಸಹಾಯಕ ಕಾರ್ಯಪಲಕ ಇಂಜಿನಿಯರ್ ಉಮಾಮಹೇಶ್​​ ಸೇರಿ ಮೂವರು ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕಳೆದ ಎರಡು ವರ್ಷದಿಂದ ಬಾಕಿ ಉಳಿಸಿಕೊಂಡಿದ್ದ ಜೆಜೆಎಂ ಕಾಮಗಾರಿ ಬಿಲ್​ಗೆ ಸಹಿ ಹಾಕಲು 1.5ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದನು ಎನ್ನಲಾಗಿದ್ದು ಮುಂಗಡವಾಗಿ ಚಿಕ್ಕನಾಯಕನಹಳ್ಳಿ ಕಚೇರಿಯಲ್ಲಿಯೇ ಸೋಮವಾರ ಮಧ್ಯಾಹ್ನ ಲಂಚ ಸ್ವೀಕರಿಸುವಾಗ ಎಇಇ ಉಮಾಮಹೇಶ್, ಜೆಇ ಶಶಿಕುಮಾರ್​ ಹಾಗೂ ಕಿರಣ್​ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಗುತ್ತಿಗೆದಾರ ಎನ್.ಸಿ.ಚಿಕ್ಕೇಗೌಡ ಚಿಕ್ಕನಾಯಕನಹಳ್ಳಿ ತಾಲೂಕಿನ ಅಣೇಕಟ್ಟೆ, ಕ್ಯಾತನಾಯಕನಹಳ್ಳಿ ಹಾಗೂ ಕಾರೇಹಳ್ಳಿ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರೂ ಬಿಲ್​ ಮಾಡಿಕೊಡಲು 1.50 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ಕಡತ ವಿಲೇವಾರಿಯನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದರು.

ಲಂಚ ನೀಡಲು ನಿರಾಕರಿಸಿದ ಚಿಕ್ದೂಕಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಉಮಾಶಂಕರ್, ರಾಮಕೃಷ್ಣಪ್ಪ ನೇತೃತ್ವದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net