

ತುಮಕೂರು: ಕಾರ್ಖಾನೆಯೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು 1 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು ಮುಂಗಡವಾಗಿ 50 ಸಾವಿರ ರೂ. ಪಡೆಯುವಾಗ ಕೆಪಿಟಿಸಿಎಲ್ ಪ್ರಸರಣ ವಿಭಾಗದ ಮುಖ್ಯ ಇಂಜಿನಿಯರ್ ಎನ್.ಆರ್.ನಾಗರಾಜನ್ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ನಾಗರಾಜನ್ ಪವರ್ ಲೈನ್ ಎಳೆಯಲು ಅನುಮತಿ ನೀಡುವುದಕ್ಕಾಗಿ ಗುತ್ತಿಗೆದಾರನಿಂದ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದೂರುದಾರ ನೀಡಿದ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಬುಧವಾರ ಲಂಚ ಸ್ವೀಕರಿಸುವಾಗ ಬಂಧಿಸಿ, ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ವಲಿಭಾಷಾ ನೇತÊತ್ವದಲ್ಲಿ ದಾಳಿ ನಡೆದಿದ್ದು, ದಾಳಿಯಲ್ಲಿ ಡಿವೈಎಸ್‌ಪಿ ಹರೀಶ್, ಮಂಜುನಾಥ್, ಇನ್ಸ್ಪೆಕ್ಟರ್ ರಾಮರೆಡ್ಡಿ, ಸತ್ಯನಾರಾಯಣ್, ಶಿವರುದ್ರಪ್ಪ ಮೇಟಿ ಇದ್ದರು.