ಸಾಲ ಸೌಲಭ್ಯಕ್ಕಾಗಿ ಅರ್ಜಿ

Application
Published on

ತುಮಕೂರು: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲು ಅರ್ಹ ವೀರಶೈವ ಲಿಂಗಾಯತ ಸಮುದಾಯದವರಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.


ಬಸವಬೆಳಗು(ಹೊಸತು), ವಿದೇಶ ವಿದ್ಯಾವಿಕಾಸ(ಹೊಸತು, ನವೀಕರಣ), ಜೀವಜಲ, ಕಾಯಕ ಕಿರಣ, ಭೋಜನಾಲಯ ಕೇಂದ್ರ, ವಿಭೂತಿ ಘಟಕ, ಸ್ವಾವಲಂಬಿ ಸಾರಥಿ, ಸ್ವಯಂ ಉದ್ಯೋಗ(ವಾಣಿಜ್ಯ ಬ್ಯಾಂಕ್​ಗಳ ಸಹಯೋಗದೊಂದಿಗೆ) ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು.

ಸಾಲ ಸೌಲಭ್ಯ ಪಡೆಯಲಿಚ್ಛಿಸುವವರು ಅರ್ಜಿಯನ್ನು ಆ.31ರೊಳಗಾಗಿ ಸೇವಾಸಿಂಧು ಪೋರ್ಟಲ್​ https://sevasindhu.karnataka.gov.in, ಮೂಲಕ ಗ್ರಾಮ ಒನ್​/ಕರ್ನಾಟಕ ಒನ್​, ತುಮಕೂರು ಒನ್​ ಸೇವಾ ಕೇಂದ್ರಗಳಲ್ಲಿ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಯೋಜನೆಯಡಿ https://www.kaushalkar.com.in ಮೂಲಕ ಅರ್ಜಿ ಸಲ್ಲಿಸಬಹುದು.

ಮಾಹಿತಿಗಾಗಿ ನಿಗಮದ ವೆಬ್​ಸೈಟ್​ https://kvldcl.karnataka.gov.in ಅಥವಾ ನಿಗಮದ ಕೇಂದ್ರ ಕಚೇರಿ ದೂ. 080- 22865522, ಮೊ.9900012351 ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂ.0816-2005008 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net