

ಚಿಕ್ಕನಾಯಕನಹಳ್ಳಿ: ಕಂದಿಕೆರೆ ಹೋಬಳಿ ತಿಮ್ಮನಹಳ್ಳಿ ಬೆಸ್ಕಾಂ ಶಾಖೆಯಲ್ಲಿ ಲೈನ್‌ಮೆನ್ ಆಗಿ ಸೇವೆ ಸಲ್ಲಿಸುತ್ತಿದ್ದ ಯಾದಗಿರಿ ಜಿಲ್ಲೆಯ ಸವದತ್ತಿ ಮೂಲದ ಮುತ್ತು(25) ಎಂಬ ಯುವಕ ಶನಿವಾರ ಅಜ್ಜಿಗುಡ್ಡೆ ಗ್ರಾಮದಲ್ಲಿ ನಿರಂತರ ವಿದ್ಯುತ್ ಸರಬರಾಜು ಕಾಮಗಾರಿ ಕೆಲಸ ನಿರ್ವಹಿಸುವಾಗ ವಿದ್ಯುತ್ ಕಂಬದಿಂದ ಬಿದ್ದು ಸಾವನ್ನಪ್ಪಿದ್ದಾರೆ.
10 ವರ್ಷಗಳಿಂದ ಲೈನ್ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೃತ ಮುತ್ತು ಕಾತ್ರಿಕೇಹಾಲ್ ಗ್ರಾಮದಲ್ಲಿ ಪತ್ನಿ ಹಾಗೂ ಎರಡು ವರ್ಷದ ಮಗು ಜತೆ ವಾಸವಾಗಿದ್ಅದರು.
ವಿದ್ಯುತ್ ಕಂಬದಲ್ಲಿ ಕ್ಲಾಂಪ್ ಕಟ್ಟುವ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ತಲೆಗೆ ತೀವ್ರ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.