ಜಿಲ್ಲೆಯಲ್ಲಿ ಮತ್ತೆರಡು ದಿನ ಹಗುರ ಮಳೆ ನಿರೀಕ್ಷೆ

Rain
Published on

ತುಮಕೂರು: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಾದ್ಯಂತ ಆ.31ರ ವರೆಗೂ ಹಗುರ ಮಳೆಯಾಗಲಿದ್ದು ಗುರುವಾರ ರಾತ್ರಿ ಬಹುತೇಕ ಕಡೆಗಳಲ್ಲಿ ಮಗೆ ಮಳೆ ಸುರಿದಿದೆ.

ತಿಪಟೂರು ತಾಲೂಕು ಕಿಬ್ಬನಹಳ್ಳಿಯಲ್ಲಿ 5 ಸೆಮೀ, ಹಾಲ್ಕುರಿಕೆ 23.8ಮಿಮೀ, ಮಳೆಯಾಗಿದೆ, ಕೊರಟಗೆರೆ 13ಮಿಮೀ, ತೋವಿನಕೆರೆಯಲ್ಲಿ 16.8ಮಿಮೀ, ಹೊಳವನಹಳ್ಳಿ 11.6, ಶಿರಾ 19ಮಿಮೀ, ಚಿಕ್ಕನಹಳ್ಳಿ 16, ತಾವರೇಕೆರೆ 10.2, ಹುಣುಸೆಹಳ್ಳಿ 12.6, ಚಿಕ್ಕನಾಯಕನಹಳ್ಳಿ 18.4, ಹುಳಿಯಾರು 12.4, ಶೆಟ್ಟಿಕೆರೆ 22.4, ಮತಿಟ್ಟ 30.4, ದೊಡ್ಡಎಣ್ಣೆಗೆರೆ 14.3ಮಿಮೀ ಮಳೆಯಾಗಿದೆ.

ಗುಬ್ಬಿ ತಾಲೂಕು 23ಮಿಮೀ, ಸಿ.ಎಸ್​.ಪುರ 12, ಅಂಕಸಂದ್ರ 18.2, ಕಡಬ 18.6, ಚೇಳೂರು 17, ನಿಟ್ಟೂರು 18 ಹಾಗೂ ಹಾಗಲವಾಡಿಯಲ್ಲಿ 18.6 ಮಿಮೀ ಮಳೆಯಾಗಿದೆ.

ಭಾರಿ ಮಳೆಯಾದರೆ ಸಹಾಯವಾಣಿ: ಮುಂಗಾರು ಹಂಗಾಮಿನಲ್ಲಿ ಪ್ರಸ್ತುತ ನಿರಂತರ ಮೋಡ ಕವಿದ ವಾತಾವರಣ ಮತ್ತು ಭಾರಿ ಮಳೆಯಾಗುತ್ತಿದ್ದು, ಮಳೆಯಿಂದ ಉಂಟಾಗುವ ನಷ್ಟದ ಕುರಿತು ಮತ್ತು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಶುಭ ಕಲ್ಯಾಣ್​ ತಿಳಿಸಿದ್ದಾರೆ. ಜಿಲ್ಲೆಯ ಸಾರ್ವಜನಿಕರು ಮಳೆಯಿಂದ ಉಂಟಾಗುವ ಯಾವುದೇ ನಷ್ಟ ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿ 7304975519 ಅಥವಾ ದೂರವಾಣಿ 0816- 2213400, 155304; 7304975519 ದಿನದ 24 ಗಂಟೆಯೂ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net