ಜೀವನ್​ ಪ್ರಮಾಣ ಪತ್ರ ಅಭಿಯಾನ

Indian Post
Published on

ತುಮಕೂರು: ಭಾರತೀಯ ಅಂಚೆ ಇಲಾಖೆ ಇಂಡಿಯಾ ಪೋಸ್ಟ್​ ಪೇಮೆಂಟ್​ ಬ್ಯಾಂಕ್​ ಸಹಯೋಗದೊಂದಿಗೆ ನ.1 ರಿಂದ 31ರ ವರೆಗೆ ಜೀವನ್​ ಪ್ರಮಾಣ ಪತ್ರ(ಡಿಜಿಟಲ್​ ಲೈಫ್​ ಸರ್ಟಿಫಿಕೇಟ್​) ಅಭಿಯಾನ ಹಮ್ಮಿಕೊಂಡಿದ್ದು, ಈ ಅಭಿಯಾನದಲ್ಲಿ ಎಲ್ಲಾ ಪಿಂಚಣಿದಾರರಿಗೆ ಅವರ ಮುಖ ಚಹರೆ, ಬೆರಳಚ್ಚು ದೃಢೀಕರಣದ ಮೂಲಕ ಸೇವೆ ಒದಗಿಸಲಾಗುವುದು.

ಪಿಂಚಣಿದಾರರ ಮನೆ ಬಾಗಿಲಿಗೆ ಅಂಚೆ ಪೇದೆಗಳು ಈ ಸೇವೆಯನ್ನು ಒದಗಿಸಲಿದ್ದು, ಪಿಂಚಣಿದಾರರು ಹಾಗೂ ಹಿರಿಯ ನಾಗರಿಕರು ಸೇವೆಯ ಸದ್ಬಳಕೆ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿ, ಗಾಂಧಿ ನಗರದಲ್ಲಿರುವ ಭಾರತೀಯ ಅಂಚೆ ಇಲಾಖೆ ತುಮಕೂರು ವಿಭಾಗದ ಅಂಚೆ ಅಧೀಕ್ಷಕರ ಕಚೇರಿ, ಮೊ.7780654933 ಅಥವಾ ದೂ.0816-2278281 ಸಂಪರ್ಕಿಸಿ ಎಂದು ಅಂಚೆ ಅಧೀಕ್ಷಕ ಬಿ.ಎಂ.ಶಂಕರಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net