

ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುರಿ, ಕೋಳಿ, ಮೀನು ಹಾಗೂ ಮಾಂಸ ಮಾರಾಟ ಉದ್ದಿಮೆದಾರರು ಮಾಂಸ ಮಾರಾಟ ಮಾಡಲು ಕಡ್ಡಾಯವಾಗಿ ಉದ್ದಿಮೆ ಪರವಾನಗಿ ಪಡೆಯಬೇಕು ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ವಿರೇಶ್ ಕಲ್ಮಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ವರ್ಫಿಗಳಿಂದ ಉದ್ದಿಮೆ ಪರವಾನಗಿ ಪಡೆಯದೇ ಹಾಗೂ ನವೀಕರಣ ಮಾಡಿಸದೇ ಉದ್ದಿಮೆ ನಡೆಸುತ್ತಿರುವುದು ಕಂಡು ಬಂದಿದ್ದು, ಬಾಕಿ ಇರುವ ಉದ್ದಿಮೆ ಪರವಾನಗಿಯ ಶುಲ್ಕ(ಬೇಡಿಕೆ ಶುಲ್ಕ)ವನ್ನು ಪ್ರಸ್ತುತ ವರ್ಷದಲ್ಲಿ ಪಾವತಿಸಿ ಕಡ್ಡಾಯವಾಗಿ ಉದ್ದಿಮೆ ಪರವಾನಗಿ ಪಡೆದು ಉದ್ದಿಮೆಗಳನ್ನು ನಡೆಸಬೇಕಿದೆ.
ಉದ್ದಿಮೆದಾರರು ಸದರಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಸಂಬಂಧಿಸಿದವರ ಉದ್ದಿಮೆಯ ಮೇಲೆ ಕೆ.ಎಂ.ಸಿ ಕಾಯ್ದೆಯನ್ವಯ ಕ್ರಮವಹಿಸಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.