ಗ್ರಾಪಂ ಗ್ರಂಥಾಲಯಗಳಿಗೂ ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಶೀಘ್ರ

web
Published on

ತುಮಕೂರು: ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಆಯ್ದ ಗ್ರಂಥಾಲಯದ ಮೇಲ್ವೀಚಾರಕರಿಗೆ ಡಿ.ಜಿ.ವಿಕಸನ ತರಬೇತಿ ನೀಡಲಾಯಿತು.

ಗ್ರಾಮೀಣಾಬಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಸಂಸ್ಥೆಯ ಸಹಯೋಗದಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ತಾಪಂ ಇಒ ಹರ್ಷಕುಮಾರ ಮಾತನಾಡಿದರು.

ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಲ್ಲಿ ನೀಡಿರುವ ಸಾಧನಗಳನ್ನು ಸಮುದಾಯದವರಿಗೆ, ವಿದ್ಯಾರ್ಥಿಗಳಿಗೆ ಓದುಗರಿಗೆ ಉಪಯುಕ್ತವಾಗುವ ರೀತಿಯಲ್ಲಿ ಬಳಸಿಕೊಳ್ಳಲು ಸಲಹೆ ನೀಡಿದರು.

ಶಿಕ್ಷಣ ಪೌಂಡೇಶನ್ ಜಿಲ್ಲಾ ಸಂಯೋಜಕ ಡಿ.ಆರ್.ನಿಂಗಪ್ಪ ಮಾತನಾಡಿ, ಗ್ರಾಮ ಡಿಜಿ ವಿಕಸನ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ 124 ಗ್ರಂಥಾಲಯಗಳು ಆಯ್ಕೆಯಾಗಿದ್ದು, ಇದರಲ್ಲಿ ತುಮಕೂರು ತಾಲೂಕಿನ 10 ಗ್ರಂಥಾಲಯಗಳು ಆಯ್ಕೆಯಾಗಿದೆ ಎಂದರು.

ಆಯ್ಕೆಯಾಗಿರುವ ಗ್ರಂಥಾಲಯಗಳುಗೆ ಟಿವಿ, ಮೊಬೈಲ್, ಮಾನಿಟರ್, ಲ್ಯಾಪ್‌ಟಾಪ್ ನೀಡಲಾಗುವುದು ಎಂದರು.

ಗ್ರಂಥಾಲಯ ಮೇಲ್ವಿಚಾರಕರ ಸಂಘದ ರಾಜ್ಯ ಉಪಾಧ್ಯಕ್ಷ ಶಿವಮೂರ್ತಿ, ತಾಲೂಕು ಅಧ್ಯಕ್ಷ ಮಾಲಿಂಗಯ್ಯ, ಜಿಲ್ಲಾ ಉಪಾಧ್ಯಕ್ಷೆ ಸವಿತ್ರಮ್ಮ, ತಾಲೂಕು ಖಜಾಂಚಿ ಜಿ.ವಿ.ಸಿದ್ದಲಿಂಗಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net