

ತುಮಕೂರು: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ 2023 ಮುಂಗಾರು ಅಡಿ ರಾಗಿ (ಮಳೆಯಾಶ್ರಿತ ಮತ್ತು ನೀರಾವರಿ), ಶೇಂಗಾ (ಮಳೆಯಾಶ್ರಿತ) ಮತ್ತು ಭತ್ತ (ನೀರಾವರಿ) ಬೆಳೆಗಳಿಗೆ ನೋಂದಾಯಿಸಲು ಆಗಸ್ಟ್ 16, 2023 ಕೊನೆಯ ದಿನವಾಗಿದೆ.
ಭತ್ತ(ನೀರಾವರಿ) ಎಕರೆಗೆ ವಿಮಾಕಂತು 754.77 ರೂ., ಶೇಂಗಾ(ಮಳೆ ಆಶ್ರಿತ) ಎಕರೆಗೆ ವಿಮಾಕಂತು 441.12 ರೂ., ರಾಗಿ (ಮಳೆ ಆಶ್ರಿತ) ಎಕರೆಗೆ ವಿಮಾಕಂತು 344.00 ರೂ. ಹಾಗೂ ರಾಗಿ(ನೀರಾವರಿ) ಎಕರೆಗೆ ವಿಮಾಕಂತು 410.77 ರೂ.ಗಳಾಗಿದೆ.