ಅರ್ಜಿ ಆಹ್ವಾನ

laptop
ಸಾಂದರ್ಭಿಕ ಚಿತ್ರ
Published on

ತುಮಕೂರು: ಜಿಲ್ಲೆಯಲ್ಲಿ ಸೆಲೆಬ್ರಲ್​ ಪಾಲ್ಸಿವುಳ್ಳ (ಬೆನ್ನುಹುರಿ ಅಪಘಾತಕ್ಕೆ ಒಳಗಾದ) ದೈಹಿಕ ವಿಕಲಚೇತನರಿಗೆ ಮೋಟಿವೇಷನಲ್​ ವೀಲ್​ಛೇರ್​ ಮತ್ತು ಎಸ್​.ಎಸ್​.ಎಲ್​.ಸಿ. ಗಿಂತ ನಂತರದ ಉನ್ನತ ವ್ಯಾಸಂಗ ಮಾಡುತ್ತಿರುವ ವಿವಿಧ ಬಗೆಯ ವಿಕಲಚೇತನ (ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.


ಜಿಲ್ಲಾ ಪಂಚಾಯತ್​ ವಿವಿಧ ಕಾರ್ಯಕ್ರಮಗಳಡಿ ಕ್ರೋಢಿಕೃತಗೊಂಡಿರುವ ಶೇ.5ರ ಅನುದಾನದಲ್ಲಿ ಈ ಸೌಲಭ್ಯ ನೀಡಲಾಗುತ್ತಿದ್ದು, ಆಸಕ್ತ ವಿಕಲಚೇತನ ವ್ಯಕ್ತಿ, ವಿದ್ಯಾರ್ಥಿಗಳು ಆಗಸ್ಟ್​ 3ರೊಳಗಾಗಿ ಆಯಾ ತಾಲ್ಲೂಕು ಪಂಚಾಯಿತಿಗಳಲ್ಲಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ತಮ್ಮ ದಾಖಲಾತಿಗಳನ್ನು ಸಲ್ಲಿಸಬೇಕು.


ಮೋಟಿವೇಷನಲ್​ ವೀಲ್​ಚೇರ್​ ಪಡೆಯಲು ಸೆಲೆಬ್ರಲ್​ ಪಾಲ್ಸಿವುಳ್ಳ (ಬೆನ್ನುಹುರಿ ಅಪಘಾತಕ್ಕೆ ಒಳಗಾದ) ಶೇ.75ಕ್ಕಿಂತ ಹೆಚ್ಚಿನ ದೈಹಿಕ ವಿಕಲತೆ ಪ್ರಮಾಣವಿರುವ ಬಗ್ಗೆ ಯುಡಿಐಡಿ, ಬಿಪಿಎಲ್​ ಪಡಿತರ ಹೊಂದಿರಬೇಕು, ಇಲಾಖೆ ಅಥವಾ ಇತರೆ ಯಾವ ಮೂಲಗಳಿಂದ ಮೋಟಿವೇಷನಲ್​ ವೀಲ್​ಛೇರ್​ ಮತ್ತು ಯಂತ್ರಚಾಲಿತ ವಾಹನವನ್ನು ಪಡೆಯದಿರುವ ಬಗ್ಗೆ ಧೃಢೀಕರಣ ಪತ್ರ ಸಲ್ಲಿಸಬೇಕು.


ಲ್ಯಾಪ್​ಟಾಪ್​ ಪಡೆಯಲು ದೃಷ್ಟಿದೋಷವುಳ್ಳ ವಿಕಲಚೇತನರನ್ನು ಹೊರತುಪಡಿಸಿ ಉಳಿದ ಬಗೆಯ ವಿಕಲಚೇತನ ವಿದ್ಯಾರ್ಥಿಗಳಾಗಿರಬೇಕು, ಎಸ್​ಎಸ್​ಎಲ್​ಸಿ ಗಿಂತ ನಂತರದ ಉನ್ನತ ವ್ಯಾಸಂಗ ಮಾಡುತ್ತಿರುವ ಬಗ್ಗೆ ಪ್ರಮಾಣ ಪತ್ರ, ಇಲಾಖೆ ಅಥವಾ ಇತರೆ ಯಾವ ಮೂಲಗಳಿಂದ ಲ್ಯಾಪ್​ಟಾಪ್​ ಪಡೆಯದಿರುವ ಬಗ್ಗೆ ಧೃಢೀಕರಣ ಸಲ್ಲಿಸಬೇಕು.


ಮಾಹಿತಿಗೆ ವಿಕಲಚೇತನರ ಸಹಾಯವಾಣಿ ಕೇಂದ್ರದ ದೂ.0816- 2005053, 2270029 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net