

ತುಮಕೂರು: ಕೆರೆ ಒತ್ತುವರಿ ತಡೆಗಟ್ಟುವ ಉದ್ದೇಶದಿಂದ ರಾಜ್ಯದ ಎಲ್ಲಾ ಗ್ರಾಮಗಳಲ್ಲಿಯೂ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ ರಚಿಸಲು ಸರ್ಕಾರ ಚಿಂತಿಸಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ತಿಪಟೂರು ತಾಲೂಕಿನ ಕೋಟೆನಾಯಕನಹಳ್ಳಿಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ, ಕೆರೆಗಳಿಗೆ ನೀರು ತುಂಬುವ ಜಾಕ್‌ವೆಲ್ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ರಾಜ್ಯದಲ್ಲಿ ಕೆರೆ ಒತ್ತುವರಿ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದ 40 ಸಾವಿರ ಕೆರೆಗಳ ಪೈಕಿ 8 ಸಾವಿರ ಕೆರೆಗಳ ಸರ್ವೇ ಪೂರ್ಣಗೊಳಿಸಲಾಗಿದೆ. 22.5 ಸಾವಿರ ಎಕರೆ ಸರ್ಕಾರಿ ಜಮೀನು ಉಳಿಸಲಾಗಿದೆ. ಒತ್ತುವರಿ ತೆರವು ಕರ‍್ಯಾಚರಣೆ ಮುಂದುವರೆದಿದೆ ಎಂದರು.