

ಹಂದನಕೆರೆ: ತಿಪಟೂರು ಘಟಕದಿಂದ ಸೇವೆ ಒದಗಿಸಿರುವ ಬಸ್ ಬೆಂಗಳೂರು ಹಾಗೂ ಅರಸೀಕೆರೆ ತಾಲೂಕು ಜೆ.ಸಿ.ಪುರ ಮಾರ್ಗದಲ್ಲಿ ಭಾನುವಾರದಿಂದ ಸೇವೆ ಆರಂಭಿಸಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ, ಭೀಮಸಂದ್ರ, ಕೆಂಗಲಾಪುರ ಮತ್ತಿತರರ ಗಡಿ ಗ್ರಾಮಗಳ ಜನರಿಗೆ ಸೌಲಭ್ಯ ಸಿಗಲಿದೆ.
ಬೆಳಗ್ಗೆ 5.30ಕ್ಕೆ ಅರಸೀಕೆರೆ ತಾಲೂಕು ಜೆ.ಸಿ.ಪುರದಿಂದ ಪ್ರಯಾಣ ಆರಂಭಿಸುವ ಬಸ್ ಮಾಡಾಳು, ಡಿ.ಎಂ.ಕುರ್ಕೆ, ಭೀಮಸಂದ್ರ, ಹಂದನಕೆರೆ, ಮತಿಘಟ್ಟ, ಚಿಕ್ಕನಾಯಕನಹಳ್ಳಿ ಮರ್ಗದ ಮೂಲಕ ಬೆಂಗಳೂರು ತಲುಪಲಿದೆ.
ಮಧ್ಯಾಹ್ನ 1.40ಕ್ಕೆ ಬೆಂಗಳೂರಿನಿAದ ಹೊರಡುವ ಬಸ್ ಇದೇ ಮಾರ್ಗವಾಗಿ ವಾಪಸಾಗಲಿದ್ದು ಗ್ರಾಮೀಣ ಭಾಗದ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.