ಸಿಎಂ ಉದ್ಘಾಟಿಸಿದ್ದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾರ್ಯಾರಂಭ ಯಾವಾಗ?

DC_KSRTC
Published on

ತುಮಕೂರು: ನಗರದಲ್ಲಿ ನಿರ್ಮಾಣವಾಗಿರುವ ನೂತನ ಕೆಎಸ್‌ಆರ್‌ಟಿಸಿ ಡಿ.ದೆವರಾಜ ಅರಸು ಬಸ್ ನಿಲ್ದಾಣ ಕಾಮಗಾರಿ ಮೇ ಅಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೂಚನೆ ನೀಡಿದರು.

ಶುಕ್ರವಾರ ಸಂಜೆ ದೇವರಾಜ ಅರಸು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಅವರು, ಕೆಎಸ್‌ಆರ್‌ಟಿಸಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತ್ರಿವೇಣಿ ಅವರಿಂದ ಕಾಮಗಾರಿ ಪ್ರಗತಿ ಮಾಹಿತಿ ಪಡೆದರು.

ಕೆಲಸಗಾರರನ್ನು ಪಾಳಿ ಆಧಾರದ ಮೇಲೆ ನಿಯೋಜಿಸಿ ಬಾಕಿ ಇರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಲಿಫ್ಟ್ ಕಾರ್ಯಾಚರಣೆ, ಮುಂಭಾಗದ ಆವರಣ ಗೋಡೆ, ಶೌಚಾಲಯ, ವಿದ್ಯುತ್ ಸಂಪರ್ಕ, ಫಾಲ್ ಸೀಲಿಂಗ್, ಸೈನ್ ಬೋರ್ಡ್, ಸಿಸಿಟಿವಿ ಕ್ಯಾಮೆರಾ, ಅಗ್ನಿಶಾಮಕ ಯಾಂತ್ರಿಕ ಕೆಲಸ, ಹೊರ ಹೋಗುವ ಹಾಗೂ ಒಳ ಬರುವ ಮಾರ್ಗ ನಿರ್ಮಾಣ, ಲ್ಯಾಂಡ್ ಸ್ಕೇಪಿಂಗ್ ಕೆಲಸ, ಅಂತಿಮ ಕೋಟ್ ಪೇಂಟ್, ರ‍್ಯಾಂಪ್ ಕೆಲಸ, ಸ್ಟçಕ್ಚರಲ್ ಮೆರುಗು ಕೆಲಸ, ಟಿಸಿ ಪಾಯಿಂಟ್ ಮತ್ತು ಪೊಲೀಸ್ ಚೌಕಿ ನಿರ್ಮಾಣ ಕಾಮಗಾರಿಗಳು ಬಾಕಿ ಇದ್ದು, ಮೇ 30ರೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಇಂಜಿನಿಯರ್ ತ್ರಿವೇಣಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net