

ಮಧುಗಿರಿ: ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಪ್ರಾದ್ಯಾಪಕಿ ಡಾ.ಆರ್. ಕಾವಲಮ್ಮ ಕೆಪಿಎಸ್.ಸಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿ ರೆಡ್ಡಿಹಳ್ಳಿ ಗ್ರಾಮದ ಶ್ರೀಮತಿ ನರಸಮ್ಮ ಮತ್ತು ನರಸಪ್ಪ ದಂಪತಿಗಳ ಮಗಳಾಗಿದ್ದು, ಬಡ ಕುಟುಂಬದಲ್ಲಿ ಸಾಮಾನ್ಯ ರೈತನ ಹೆಣ್ಣು ಮಗಳಾಗಿ ಜನಿಸಿದ ಡಾ.ಆರ್.ಕಾವಲಮ್ಮರವರು ತನ್ನ ಪ್ರತಿಭೆಯಿಂದ ಸ್ನಾತಕೋತ್ತರ ಪದವಿ ಪಡೆದು, ಡಾಕ್ಟರೇಟ್ ಗಳಿಸಿ ಉತ್ತಮ ಪ್ರಾಧ್ಯಾಪಕಾರಾಗಿ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಇತಿಹಾಸ ಬೋಧಿಸುತ್ತಾ ಹಲವಾರು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಸ್ತುತ ಕರ್ನಾಟಕ ಲೋಕಾ ಸೇವಾ ಆಯೋಗದ ಸದಸ್ಯರಾಗಿ ಕರ್ನಾಟಕ ಸರ್ಕಾರದ ಶಿಫಾರಸ್ಸಿನ ಮೇರೆಗೆ ನೇಮಕವಾಗಿದ್ದಾರೆ. ಡಾ.ಆರ್.ಕಾವಲಮ್ಮ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಜನ ಮನ್ನಣೆ ಗಳಿಸುವ ಮೂಲಕ ತಮ್ಮ ಪ್ರತಿಭೆ ಹೊರ ಹೊಮ್ಮಿಸುವ ನಿಟ್ಟಿನಲ್ಲಿ ವಿದ್ವಾಂಸರ ವಲಯದಲ್ಲಿ ಸ್ನೇಹ ಭಾವದಿಂದ ಸಮಾಜ ಮುಖಿ ಚಿಂತನೆಗಳನ್ನು ಬೆಳಸಿಕೊಂಡು ಹಂತ ಹಂತವಾಗಿ ರಾಜ್ಯದ ಗಮನವನ್ನೇ ಸಳೆದರು.
ಹಾಗಾಗಿ, ಇವರ ಅರ್ಹತೆಯನ್ನು ಗುರುತಿಸಿ ಕರ್ನಾಟಕ ಸರ್ಕಾರದ ಶಿಫಾರಸ್ಸಿನ ಮೇರೆಗೆ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಕರ್ನಾಟಕ" ಲೋಕಾಸೇವಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.