ಕೊರಟಗೆರೆಯಲ್ಲಿ ಬಿಜೆಪಿ ಗೆಲುವು ಖಚಿತ; ಬಿ.ವೈ.ವಿಜಯೇಂದ್ರ ವಿಶ್ವಾಸ

BYV
Published on

ತುಮಕೂರು: ಶಿರಾ ಉಪಚುನಾವಣೆಯಂತೆ ಈ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಕೊರಟಗೆರೆಯಲ್ಲಿ ಆಯೋಜಿಸಿದ್ದ ಬಿಜೆಪಿ ಯುವ ಮೊರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು, ಕೊರಟಗೆರೆಯಲ್ಲಿ ಬಿಜೆಪಿ ಪರವಾದ ಅಲೆಯಿದ್ದು ಈ ಚುನಾವಣೆಯಲ್ಲಿ ನಮ್ಮ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸವಾಲೆಸೆದರು.

ರಾಜ್ಯ ಪ್ರವಾಸದ ಕಾರಣದಿಂದ ನನಗೆ ಗಂಟಲು ಸರಿ ಇರಲಿಲ್ಲ, ಏಕೆ ಆರೋಗ್ಯ ಸರಿ ಇಲ್ವಾ ರಂದು ನನ್ನ ತಂದೆ ಕೇಳಿದರು. 80 ವರ್ಷದ ನಾನೇ ರಾಜ್ಯ ಪ್ರವಾಸ ಮಾಡ್ತೀನಿ, ಯುವಕರು ನಿಮಗೇನಾಗಿದೆ ಅಂತ ಬೈದರು ಎಂದು ಬಿಎಸ್‌ವೈ ಪಕ್ಷ ಸಂಘಟನೆಯ ಸಾಮರ್ಥ್ಯವನ್ನು ವಿಜಯೇಂದ್ರ ಸ್ಮರಿಸಿದರು.

ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಾಟ ನಡೆಸಿದ್ದಾರೆ, ಅಂತಹ ರಾಜಕಾರಣಿ ಇನ್ನೊಬ್ಬ ಸಿಗುವುದಿಲ್ಲ ಎಂದರು.

ಶಿರಾ ಉಪಚುನಾವಣೆಯಲ್ಲಿಯೂ ಬಿಜೆಪಿ ಗೆಲುವಿನ ಬಗ್ಗೆ ಅನುಮಾನಗಳಿದ್ದವು,
ಒಂದು ಕಡೆ 5 ಬಾರಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ್ನ ಹಿರಿಯ ರಾಜಕಾರಣಿ, ಮತ್ತೊಂದು ಅನಾರೋಗ್ಯದಿಂದ ಪತಿಯನ್ನು ಕಳೆದುಕೊಂಡ ಜೆಡಿಎಸ್ ಅಭ್ಯರ್ಥಿ. ಇಬ್ಬರೂ
ಅನುಕಂಪದ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದರು ಆದರೆ, ಮೊದಲ ಬಾರಿಗೆ ಬಿಜೆಪಿ ಚುನಾವಣೆ ಗೆಲ್ಲುವು ಸಾಧಿಸಿ ಇತಿಹಾಸ ನಿರ್ಮಿಸಿದೆ ಎಂದರು.

ಕೊರಟಗೆರೆಯಲ್ಲಿಯೂ ಬಿಜೆಪಿಗೆ ಗೆಲ್ಲುವ ಎಲ್ಲಾ ಅವಕಾಶಗಳಿವೆ, ಕಾರ್ಯಕರ್ತರು ಒಟ್ಟಾಗಿ ಹೋರಾಟ ನಡೆಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net