

ತುಮಕೂರು:ಮತಗಳ್ಳತನದ ಬಗ್ಗೆ ನಾನು ಸತ್ಯವನೇ ಹೇಳಿದ್ದೆ, ನಮ್ಮ ಸರ್ಕಾರ ಇತ್ತು, ನಮ್ಮ ಬಿಎಲ್ಒಗಳು ಇದ್ದರು. ಅವರು ಸರಿಯಾಗಿ ಕೆಲಸ ಮಾಡುತ್ತಾರೋ ಇಲ್ಲವೋ ಎಂದು ಯಾರು ನೋಡಬೇಕಿತ್ತು, ನಾವೇ ಅಲ್ಲವೇ ಬಿಎಲ್ಒಗಳನ್ನು ನೇಮಕ ಮಾಡಿದ್ದು ಪಕ್ಷದವರು, ಅವರು ಸರಿಯಾಗಿ ಕೆಲಸ ಮಾಡುತ್ತಾರೋ ಇಲ್ಲವೆ ಎಂಬುದನ್ನು ನಾವು ನೋಡಬೇಕಿತ್ತು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಮಿಡಿಗೇಶಿಯಲ್ಲಿ ಮಾತನಾಡಿದ ಅವರು, ಸರಿಯಾಗಿ ಕೆಲಸ ಮಾಡಿದರೆ ಹೇಗೆ ನಕಲಿ ವೋಟ್ ಸೇರುತ್ತದೆ. ಪದವರು ಎಚ್ಚೆತ್ತುಕೊಳ್ಳಬೇಕಿತ್ತು ಈಗ ನಮ್ಮ ನಾಯಕರಾದ ರಾಹುಲ್ಗಾಂಧಿ ನಮ್ಮ ಕಣ್ಣು ತೆರೆಸಿದ್ದಾರೆ ಎಂದಷ್ಟೇ ನಾನು ಹೇಳಿದ್ದೇ ಆದರೆ, ಇದೇ ಹೇಳಿಕೆಯನ್ನು ತಿರುಚಿ ಹೈಕಮಾಂಡ್ಗೆ ದೂರಿದರು ಎಂದು ರಾಜಣ್ಣ ಅಸಮಧಾನ ಹೊರಹಾಕಿದರು.