ಲೋಕಸಭೆ ಚುನಾವಣೆಯಲ್ಲಿ ಹಾಸನ ಜವಬ್ಧಾರಿ ನಾನೇ ಹೊರುತ್ತೇನೆ: ಸಚಿವ ಕೆ.ಎನ್.ರಾಜಣ್ಣ

K N Rajanna vvani
Published on

ತುಮಕೂರು: ದೆಹಲಿಯಲ್ಲಿ ನಡೆದ ಸಭೆಯಲ್ಲಿ 28 ಸೀಟು ಗೆಲ್ಲುತ್ತೇವೆ ಎಂದು ಮಾತುಕೊಟ್ಟು ಬಂದಿದ್ದೇವೆ ಪಕ್ಷ ಸೂಚಿಸಿದರೆ ನಾನೂ ಕೂಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಸಹಕಾರ ಸಚಿವ ಕೆ.ಎನ್‌ರಾಜಣ್ಣ ಹೇಳಿದರು.

ನಗರದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಶಾಸಕನಾಗಿದ್ದೇನೆ, ಕಾಂಗ್ರೆಸ್ ಹೈಕಮಾಂಡ್ ಅಪೇಕ್ಷೆಯಂತೆ ಮಂತ್ರಿ ಕೂಡ ಆಗಿದ್ದೇನೆ. ಮುಂದೆ ಲೋಕಸಭೆಗೆ ನಿಲ್ಲಬೇಕು ಅಂದ್ರೆ ನಿಲ್ಲಲು ಸಿದ್ಧನಿದ್ದೇನೆ ಎಂದರು.

ಮಂತ್ರಿಗಳು ಚುನಾವಣೆಗೆ ಸ್ಫರ್ಧಿಸಬೇಕು ಎಂಬ ಯಾವ ರೀತಿಯ ಸೂಚನೆಯೂ ಈವರೆಗೂ ಬಂದಿಲ್ಲ, ಸಿಎಂ ಸೇರಿದಂತೆ 34 ಸಚಿವರಿಗೂ ಒಂದೊಂದು ಲೋಕಸಭೆ ಕ್ಷೇತ್ರವನ್ನ ಉಸ್ತುವಾರಿ ಕೊಡುತ್ತಾರೆ, ನಾನು ಹಾಸನದ ಜವಬ್ಧಾರಿ ತೆಗೆದುಕೊಳ್ಳುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net