ಜಾತಿ ಹೆಸರೇಳಿ ರಾಜಕಾರಣ ಮಾಡೋದು ಕುಮಾರಸ್ವಾಮಿ, ನಾವಲ್ಲ: ಕೆ.ಎನ್.ರಾಜಣ್ಣ

kn rajanna hdk hdd
Published on

ತುಮಕೂರು: ಪರಮೇಶ್ವರ ಹಾಗೂ ರಾಜಣ್ಣ ದಲಿತ ಹೆಸರೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿರುಗೇಟು ನೀಡಿದರು.

ನಾವು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ, ಎಲ್ಲಾ ಬಡವರ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರ ಬಡವರು, ದಲಿತರು ಸೇರಿದಂತೆ ಎಲ್ಲ ವರ್ಗದ ಶೋಷಿತರ ಪರವಾಗಿದೆ. ಆದರೆ, ಕುಮಾರಸ್ವಾಮಿ ಯಾರ ಹೆಸರೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಲಿ ಎಂದು ಹರಿಹಾಯ್ದಿದ್ದಾರೆ.

ನಾವು ಇನ್ನೊಬ್ಬರ ಕಡೆ ಒಂದು ಬೆರಳು ತೋರಿಸಿ ಟೀಕೆ ಮಾಡಿದರೆ ಇನ್ನುಳಿದ ಮೂರು ಬೆರಳುಗಳು ನಮ್ಮ ಕಡೆ ತೋರಿಸುತ್ತವೆ. ಇದನ್ನು ನಾವುಗಳು ಬೇರೆಯವರ ಬಗ್ಗೆ ಮಾತನಾಡುವ ಮುನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net