

ತುಮಕೂರು: ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 514ನೇ ಜಯಂತೋತ್ಸವದಲ್ಲಿ ತಿಪಟೂರಿನ ಗಂಗನಘಟ್ಟದ ಡಾ.ವಿವೇಚನ್ ಅವರಿಗೆ ಶ್ರೀಡಾ.ನಿರ್ಮಲಾನಾಥನಂದಸ್ವಾಮೀಜಿ 2023ನೇ ಸಾಲಿನ ಜಿಲ್ಲಾ ಮಟ್ಟದ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದರು.
ಒಕ್ಕಲಿಗ ಸಮುದಾಯ ಸಮಾಜದ ಎಲ್ಲಾ ಸಮುದಾಯವನ್ನು ತನ್ನೊಟ್ಟಿಗೆ ತೆಗೆದುಕೊಂಡು ಹೋಗುವ ವಿಶ್ವಮಾನವ ಪರಿಕಲ್ಪನೆ ಹೊಂದಿರುವ ಸಮುದಾಯ ಎಂದು ಸ್ವಾಮೀಜಿ ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಸೇವೆ ಗುರುತಿಸಿ ಪ್ರಗತಿಪರ ರೈತರು, ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.