ಸಂತಶ್ರೇಷ್ಠ ಕನಕದಾಸ ಜಯಂತಿ

Kanakadasaru
Published on

ತುಮಕೂರು: ಜಿಲ್ಲಾಡಳಿತದ ವತಿಯಿಂದ ನವೆಂಬರ್​ 8ರಂದು ಮಧ್ಯಾಹ್ನ 12ಕ್ಕೆ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ "ಸಂತಶ್ರೇಷ್ಠ ಕನಕದಾಸ ಜಯಂತಿ' ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಕುರುಬ ಸಮುದಾಯದ 10 ಸಾಧಕರನ್ನು ಜಿಲ್ಲಾಡಳಿತ ಸನ್ಮಾನಿಸುತ್ತಿದೆ.

ಕೃಷಿ ಕ್ಷೇತ್ರದಲ್ಲಿನ ಸಾಧನೆಗೆ ತುಮಕೂರು ತಾಲೂಕು ಚಿಕ್ಕಹೊಸೂರು ಎಚ್​.ಎಸ್​.ಲಿಂಗರಾಜು, ಶಿಕ್ಷಣ ಕ್ಷೇತ್ರದಿಂದ ಶಿರಾಗೇಟ್​ ನರಸಿಂಹಮೂರ್ತಿ, ಟಿ.ಎಂ.ಕುಮಾರ್​, ರಂಗಭೂಮಿ ಕ್ಷೇತ್ರದಲ್ಲಿ ಭೀಮಸಂದ್ರದ ಟಿ.ಎಂ.ಚಿಕ್ಕಣ್ಣ, ಕರಲುಪಾಳ್ಯದ ಡಿ.ಕೆ.ರಾಮಕೃಷ್ಣಯ್ಯ, ಸಹಕಾರ ಕ್ಷೇತ್ರದಿಂದ ಉಪ್ಪಾರಹಳ್ಳಿಯ ಎಸ್​.ಕಂಬಣ್ಣ, ಸಮಾಜ ಸೇವೆ ಕ್ಷೇತ್ರದಿಂದ ವಿದ್ಯಾನಗರದ ಮಲ್ಲಿಕಾರ್ಜುನಯ್ಯ, ಜಯರಾಮು ಹಾಗೂ ಕುಣಿಗಲ್​ ತಾಲ್ಲೂಕು ಕೊಡಿಹಳ್ಳಿಯ ಚಿಕ್ಕಕಂಬಯ್ಯ, ಕ್ರೀಡಾ ಕ್ಷೇತ್ರದಿಂದ ಕೆ.ಆರ್​.ರವೀಂದ್ರ ಅವರನ್ನು ಸನ್ಮಾನಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net