

ತುಮಕೂರು: ಹೆಬ್ಬೂರು ಸರ್ಕಾರಿ ಪ್ರೌಢಶಾಲಾ ಬಾಲಕಿಯರು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿ , ದ್ವೀತಿಯ ಸ್ಥಾನ ಪಡೆದು ತಂಡದ ಐವರು ವಿಭಾಗ ಮಟ್ಟಕ್ಕೆ ಆಯ್ಕೆಯಾದರು.
ತಿಪಟೂರಿನಲ್ಲಿ ನಡೆದ ಮೊದಲೆರಡು ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಬಾಲಕಿಯರು ಫೈನಲ್ ಪಂದ್ಯದಲ್ಲಿ ತುರುವೇಕೆರೆ, ಅಜ್ಜನಹಳ್ಳಿ ಸರ್ಕಾರಿ ಪ್ರೌಢಶಾಲಾ ತಂಡದ ಬಾಲಕಿಯರ ಎದುರು ಸ್ವಲ್ಪದರಲ್ಲಿ ಎಡವಿ ದ್ವೀತಿಯ ಸ್ಥಾನಕ್ಕೆ ತೃಪ್ತಿಪಟ್ಟರು.
ಹೆಬ್ಬೂರು ಶಾಲೆಯ ಮಮತ, ಅಮೂಲ್ಯ, ಮತ್ತು ಗುರುರಾಜೇಶ್ವರಿ ಗಮನ ಸೆಳೆಯುವ ಪ್ರದರ್ಶನದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯಾದರು. ಇವರೊಟ್ಟಿಗ ಆಡಿದ ಶೇಕ್ ಸುಹಾನ ಮತ್ತು ಫಿರ್ ದೋಸ್ ಕೂಡ ವಿಭಾಗ ಮಟ್ಟಕ್ಕೆ ಆಯ್ಕೆಯಾದರು.
ವಿಭಾಗ ಮಟ್ಟಕ್ಕೆ ಆಯ್ಕೆಯಾದ ಮಕ್ಕಳನ್ನು ಶಾಲೆಯ ಮುಖ್ಯ ಶಿಕ್ಷಕ ಮೋಹನ್, ದೈಹಿಕ ಶಿಕ್ಷಣ ಶಿಕ್ಷಕಿ ಆಶಾ, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಅಭಿನಂದಿಸಿದ್ದಾರೆ.