ಜೋಗ್​ಗೆ ಕೆಎಸ್​ಆರ್​ಟಿಸಿ ಒನ್​ಡೇ ಪ್ಯಾಕೇಜ್​

JOg_Trip
Published on

ತುಮಕೂರು: ವಿಶ್ವಪ್ರಸಿದ್ಧ ಜೋಗಜಲಪಾತ ಕಣ್ತುಂಬಿಕೊಳ್ಳಲು ರಾಜ್ಯ ರಸ್ತೆ ಸಾರಿಗೆ ನಿಗಮವು ವಿಶೇಷ ಪ್ರವಾಸಿ ಪ್ಯಾಕೇಜ್​ ಆರಂಭಿಸಿದೆ. ಕೇವಲ 800 ರೂ.,ನಲ್ಲಿ ತುಮಕೂರು&ಜೋಗ ಜಲಪಾತ ವೀಕ್ಷಣೆಯ "ಒನ್​ ಡೇ' ಪ್ರವಾಸ ಪ್ಯಾಕೇಜ್​ಗೆ ಕೆಎಸ್​ಆರ್​ಟಿಸಿ ನಿಗಮದ ಅಧ್ಯಕ್ಷ ಎಸ್​.ಆರ್​.ಶ್ರೀನಿವಾಸ್​ ಹಸಿರು ನಿಶಾನೆ ತೋರಿದರು.

ತುಮಕೂರು ವಿಭಾಗವು ಈ ವಿಶೇಷ ಪ್ಯಾಕೇಜ್​ ಅನ್ನು ಭಾನುವಾರು ಮತ್ತು ಸರ್ಕಾರಿ ರಜಾದಿನಗಳಲ್ಲಿ ಆರಂಭಿಸಿದ್ದು ಆಗಸ್ಟ್​ 15 ರಂದು ಮೊದಲ ಪ್ಯಾಕೇಜ್​ ಬಸ್​ ಹೊರಡಲಿದೆ. ಬೆಳಗ್ಗೆ ದೇವರಾಜು ಅರಸು ಕೆಎಸ್ಸಾರ್ಟಿಸಿ ಬಸ್​ ನಿಲ್ದಾಣದಿಂದ ಹೊರಡಲಿರುವ ಈ ಬಸ್​ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಇಕ್ಕೇರಿಯನ್ನು ಮಧ್ಯಾಹ್ನ 12 ಹೊತ್ತಿಗೆ ತಲುಪಲಿದೆ. ಇಕ್ಕೇರಿಯಲ್ಲಿ ಅಘೋರೇಶ್ವರ ಹಾಗೂ ವರದಾಮೂಲ, ಶ್ರೀಧರ ಮಠ, ಕಲ್ಯಾಣಿ ವೀಕ್ಷಣೆ ಬಳಿಕ ಮಧ್ಯಾಹ್ನ 1.45ಕ್ಕೆ ಅಲ್ಲಿಂದ ಹೊರಟು 2.30ಕ್ಕೆ ಜೋಗ್​ ತಲುಪಲಿದೆ. ಸಂಜೆ 5.30ರವರೆಗೆ ಜೋಗ ಜಲಪಾತ ವೀಕ್ಷಣೆಗೆ ಅವಕಾಶ ಇರಲಿದೆ. ಸಂಜೆ 5.30ಕ್ಕೆ ಜೋಗ್​ಾಲ್ಸ್​ ನಿಂದ ಹೊರಟು ರಾತ್ರಿ 12.30ರ ಹೊತ್ತಿಗೆ ತುಮಕೂರಿಗೆ ಮರಳಲಿದೆ.

ವಯಸ್ಕರಿಗೆ 800 ರೂ., : ಈ ವಿಶೇಷ ಪ್ಯಾಕೇಜ್​ನಲ್ಲಿ ವಯಸ್ಕರಿಗೆ 800 ರೂ., ಹಾಗೂ ಮಕ್ಕಳಿಗೆ 500 ರೂ., ಟಿಕೆಟ್​ ದರ ಇರಲಿದೆ. ಶಕ್ತಿ ಯೋಜನೆ ಈ ಬಸ್​ನಲ್ಲಿ ಅನ್ವಯವಾಗುವುದಿಲ್ಲ. ಮುಂಗಡ ಬುಕ್ಕಿಂಗ್​ ಸಹ ಇದ್ದು ಆನ್​ ಲೈನ್​ನಲ್ಲಿ ಕೆಎಸ್​ಆರ್​ಟಿಸಿ ವೆಬ್​ಸೈಟ್​ನಲ್ಲಿ ಹೋಗಿ ಟಿಕೆಟ್​ ಕಾಯ್ದಿರಿಸಿಕೊಳ್ಳಬಹುದು. ಇದಲ್ಲದೆ, ನಿಗಮದ ಯಾವುದೇ ಬುಕ್ಕಿಂಗ್​ ಕೌಂಟರ್​ಗಳಲ್ಲಿ ಮುಂಗಡ ಸೀಟು ಕಾಯ್ದಿರಿಸಿಕೊಳ್ಳಬಹುದು.

ವಿಶ್ವ ವಿಖ್ಯಾತ ಜೋಗ್​ಪಾಲ್ಸ್​ ವೀಕ್ಷಣೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗಾಗಿ ತುಮಕೂರಿನಿಂದ ವಿಶೇಷ ಪ್ರವಾಸ ಪ್ಯಾಕೇಜ್​ ಅನ್ನು ಕೆಎಸ್​ಆರ್​ಟಿಸಿ ವತಿಯಿಂದ ಆರಂಭಿಸಲಾಗಿದೆ. ಪ್ರವಾಸೋದ್ಯಮ ಉತ್ತೇಜನಗೊಳಿಸಲು ಪ್ರತಿ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಜೋಗ ಫಾಲ್ಸ್​ ಮತ್ತು ಶಿವಮೊಗ್ಗ ಭಾಗದಲ್ಲಿರುವ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ಯಾಕೇಜ್​ ಪ್ರವಾಸ ಆರಂಭಿಸಲಾಗಿದೆ. ಎಸ್​.ಆರ್​.ಶ್ರೀನಿವಾಸ್​ ಕೆಎಸ್​ಆರ್​ಟಿಸಿ ಅಧ್ಯಕ್ಷ ತುಮಕೂರು- ಜೋಗ್​ಪಾಲ್ಸ್​ ವಿಶೇಷ ಪ್ರವಾಸ ಪ್ಯಾಕೇಜ್​ ಅನ್ನು ಆ.15 ರಂದು ಅಧಿಕೃತವಾಗಿ ಆರಂಭಿಸಲಾಗುತ್ತಿದೆ. ಒಟ್ಟು 630 ಕಿ.ಮೀ., ಈ ಪ್ರವಾಸಿ ಪ್ಯಾಕೇಜ್​ಗೆ ವಯಸ್ಕರಿಗೆ 800 ರೂ., ಮಕ್ಕಳಿಗೆ 500 ರೂ., ನಿಗದಿ ಪಡಿಸಲಾಗಿದೆ. ಪ್ರವಾಸೋದ್ಯಮ ಉತ್ತೇಜನಕ್ಕೆ ವಿಶೇಷ ಪ್ಯಾಕೇಜ್​ ಆರಂಭಿಸಲಾಗಿದೆ. ಇದಕ್ಕೆ ಹೆಚ್ಚಿನ ಬೇಡಿಕೆ ಬಂದಲ್ಲಿ ಮುಂದಿನ ದಿನಗಳಲ್ಲಿ ತುಮಕೂರು&ಸಿಗಂಧೂರು&ಕೊಲ್ಲೂರು ವಿಶೇಷ ಪ್ರವಾಸಿ ಪ್ಯಾಕೇಜ್​ ಆರಂಭಿಸುವ ಚಿಂತನೆ ಇದೆ. ಚಂದ್ರಶೇಖರ್​ ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್​ಆರ್​ಟಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net