ಉದ್ಯೋಗ ನೇರ ಸಂದರ್ಶನ

Campus Interview
Published on

ತುಮಕೂರು: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾವೆಲ್ಸ್​ ಇಂಡಿಯಾ ಲಿಮಿಟೆಡ್​, ಈಚರ್​ ಆಥರೈಸ್ಡ್​ ಹಾಗೂ ಸುಹಾಸ್​ ಆಟೋಮೋಟೀವ್​ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಸಂಬಂಧ ನಗರದ ವಾಸನ್​ ಕಣ್ಣಿನ ಆಸ್ಪತ್ರೆ ಬಳಿ ಇರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸೆ.25ರಂದು ಬೆಳಗ್ಗೆ 10ಕ್ಕೆ ನೇರ ಸಂದರ್ಶನ ನಡೆಯಲಿದೆ.

ಆಸಕ್ತ ಎಸ್​ಎಸ್​ಎಲ್​ಸಿ, ಐಟಿಐ, ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳು ತಮ್ಮ ಬಯೋಡೇಟಾದೊಂದಿಗೆ ಈ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ ದೂ.0816- 2278488, ಮೊ.9071021143, 9513136642 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net