

ತುಮಕೂರು: ತಾಯಿ, ಮಗಳ ಸೋಗಿನಲ್ಲಿ ಆಭರಣ ಕೊಳ್ಳುವ ನೆಪ ಮಾಡಿಕೊಂಡು ನಗರದ ಗುಂಚಿ ವೃತ್ತದಲ್ಲಿರುವ ಎಸ್‌ಎನ್‌ಡಿ ಜ್ಯೂಯಲರ್ಸ್ ಪ್ರವೇಶಿಸಿದ್ದ ಇಬ್ಬರು ಕಳ್ಳಿಯರು 32ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ.
ಡಿ.3ರಂದು ನಡೆದಿರುವ ಕಳ್ಳತನದ ಸಂಪೂರ್ಣ ದೃಶ್ಯ ಬಂಗಾರದಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿ, ಮಗಳು ಎಂದು ನಟನೆ ಮಾಡಿಕೊಂಡು ಅಂಗಡಿ ಪ್ರವೇಶಿಸಿರುವ ಯುವತಿ ಹಾಗೂ ಮಹಿಳೆ ಚಿನ್ನ ಖರೀದಿಸುವುದಾಗಿ ಚಿನ್ನದ ಸರಗಳ ಡಿಸೈನ್‌ಗಳನ್ನು ಪರಿಶೀಲಿಸಿದ್ದಾರೆ. ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನದ ಸರ ಕದ್ದು ಎಟಿಎಂನಲ್ಲಿ ಹಣ ಬಿಡಿಸಿ ತರುವುದಾಗಿ ಹೇಳಿ ಪರಾರಿಯಾಗಿದ್ದಾರೆ.
ಅವರು ತೆರಳಿದ ತುಂಬಾ ಹೊತ್ತಿನ ನಂತರ 32 ಗ್ರಾಂ ತೂಕದ ಚಿನ್ನದ ಸರ ಕಳ್ಳತನವಾಗಿರುವುದು ಮಾಲೀಕರ ಗಮನಕ್ಕೆ ಬಂದಿದೆ. ಕೂಡಲೇ ಸಿಸಿ ಟಿವಿ ದೃಶ್ಯಾವಳಿ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ.