

ಚಿಕ್ಕನಾಯಕನಹಳ್ಳಿ: ಜೆಡಿಎಸ್ ಜತೆ ಮುನಿಸಿಕೊಂಡಿರುವ ಉಪ್ಪಾರ ಸಮುದಾಯದ ಮುಖಂಡ, ಜಿಪಂ ಮಾಜಿ ಸದಸ್ಯ ಕಲ್ಲೇಶ್ ನಿವಾಸಕ್ಕೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಭೇಟಿ ನೀಡಿರುವುದು ಮೈತ್ರಿ ಪಕ್ಷದಲ್ಲಿ ಒಡಕಿಗೆ ಕಾರಣವಾಗಿದೆ.
ಶೆಟ್ಟಿಕೆರೆ ಜಿಪಂ ಮಾಜಿ ಸದಸ್ಯ ಕಲ್ಲೇಶ್ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದು ಜೆಡಿಎಸ್‌ನಿಂದ ದೂರವಾಗುವ ಮಾತನಾಡಿದ ಬೆನ್ನಹಿಂದೆಯೇ ಜೆ.ಸಿ.ಮಧುಸ್ವಾಮಿ ಭೇಟಿ ನೀಡಿರುವ ರಾಜಕೀಯ ತಂತ್ರಗಾರಿಕೆ ಬಗ್ಗೆಯೂ ತರಹೇವಾರಿ ಚರ್ಚೆ ಆರಂಭವಾಗಿದೆ.
ಲೋಕಸಭೆ ಚುನಾವಣೆಯವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಮಾಧುಸ್ವಾಮಿ ಸಲಹೆ ನೀಡಿದ್ದು ಆನಂತರ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕೊ ಅಥವಾ ನೂತನವಾಗಿ ಆರಂಭವಾಗಲಿದೆ ಎನ್ನಲಾಗಿರುವ ಜೆಸಿಎಂ ಬ್ರಿಗೇಡ್‌ಗೆ ಸೇರ್ಪಡೆಯಾಗಬೇಕಾ ಎಂಬುದನ್ನು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ ಕಲ್ಲೇಶ್ ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಜೆಸಿಎಂ, ಕಲ್ಲೇಶ್ ಕೆಲವು ಕಾರಣಗಳಿಂದ ಮನಸ್ಸಿಗೆ ಬೇಸರ ಮಾಡಿಕೊಂಡಿರುವುದಾಗಿ ವಿಷಯ ತಿಳಿಯಿತು ಸೌಜನ್ಯವಾಗಿ ಭೇಟಿಮಾಡಿz್ದೆÃನೆ ಎಂದರು.
ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಆಕ್ರೋಶ ಹೊರಹಾಕಿದ್ದ ಕಲ್ಲೇಶ್ ಅವರನ್ನು ಮನಒಲಿಸಲು ಜೆಡಿಎಸ್ ಶಾಸಕ ಸಿ.ಬಿ.ಸುರೇಶ್‌ಬಾಬು ನಡೆಸಿದ್ದ ಕಸರತ್ತು ಕೈಕೊಟ್ಟಿದ್ದು ಮೈತ್ರಿ ಪಕ್ಷದಲ್ಲಿಯೇ ಆಪರೇಷನ್‌ಗೆ ಮುಂದಾಗಿರುವುದು ಜೆಡಿಎಸ್ ಮುಖಂಡರನ್ನು ಕೆರಳಿಸಿದೆ ಎನ್ನಲಾಗಿದೆ.
ಭೇಟಿ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ನಿರಂಜತ್, ಮುಖಂಡ ರವಿ ಮತ್ತಿತರರು ಇದ್ದರು.