

ಚಿಕ್ಕನಾಯಕನಹಳ್ಳಿ: ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಮುಂದುವರಿಸಿದ್ದು ಶನಿವಾರ ದುಗುಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ನೂರಾರು ಕಾರ್ಯಕರ್ತರ ಜತೆ ಮನೆಮನೆ ಪ್ರಚಾರ ನಡೆಸಿದರು.
ಹರ್ಯಾಣದ ಸೋನಿಪತ್ ಕೇತ್ರದ ಸಂಸದ ರಾಜೀವ್‌ಜೈನ್ ಕೂಡ ಕಸಬಾ ಹೋಬಳಿಯ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚಿಸಿದರು.
ಕಾರೇಹಳ್ಳಿಯಲ್ಲಿ ಮಾತನಾಡಿದ ಜೆ.ಸಿ.ಮಾಧುಸ್ವಾಮಿ, ರಾಜ್ಯ ಸರ್ಕಾರ ಮೀಸಲಾತಿಯ ಕಗ್ಗಂಟನ್ನು ಬಿಡಿಸಿ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವಂತೆ ಮೀಸಲಾತಿಯನ್ನು ಪರಿಷ್ಕರಿಸಿದೆ ಎಂದರು.
ಜನಸAಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಎಲ್ಲರಿಗೂ ನ್ಯಾಯ ಸಿಗುವಂತೆ ನೀಡಲು ಮುಂದಾಗಿರುವುದು ಸುಭದ್ರ ಸರ್ಕಾರದಿಂದ ಮಾತ್ರ ಸಾಧ್ಯವಾಗಿದೆ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೇರಿದರೆ ಮಾತ್ರ ಅಭಿವೃದ್ಧಿ ಸಾಧ್ಯವಿದ್ದು ಎಲ್ಲರೂ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಚಿಕ್ಕನಾಯಕನಹಳ್ಳಿಯ ಬಹುತೇಕ ರಸ್ತೆಗಳನ್ನು ಪಕ್ಕಾ ರಸ್ತೆಗಳಾಗಿ ನಿರ್ಮಿಸಲಾಗಿದೆ, ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕೂಡ ಬಜೆಟ್‌ನಲ್ಲಿ ಘೋಷಣೆಯಾಗಿದ್ದು ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದರು.
ನಾನೇ ಹಠವಿಡಿದು ಸಣ್ಣ ನೀರಾವರಿ ಇಲಾಖೆಗೆ ಹೊಣೆ ತೆಗೆದುಕೊಂಡಿದ್ದರಿAದ ತಾಲೂಕಿನ ಎಲ್ಲಾ ಕೆರೆಗಳಿಗೆ ಶಾಶ್ವತ ನೀರುಣಿಸುವ ಯೋಜನೆಗಳಿಗೆ ನೂರಾರು ಕೋಟಿ ಅನುದಾನ ನೀಡಲು ಸಾಧ್ಯವಾಗಿದೆ, ಮುಂದೆಯೂ ನೀವು ಆಶಿರ್ವಾದ ಮಾಡಿ ಕಳುಹಿಸಿದರೆ ನಿಮ್ಮ ಋಣ ತೀರಿಸುತ್ತೇನೆ ಎಂದರು.
ಸAಸದ ರಾಜೀವ್‌ಜೈನ್ ಮಾತನಾಡಿ, ರಾಜ್ಯದಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ ಸಚಿವರಲ್ಲಿ ಜೆ.ಸಿ.ಮಾಧುಸ್ವಾಮಿ ಕೂಡ ಪ್ರಮುಖರಾಗಿದ್ದು ಅವರ ಬಗ್ಗೆ ದೆಹಲಿ ನಾಯಕರು ವಿಶ್ವಾಸವಿಟ್ಟಿದ್ದಾರೆ. ಇಂತಹ ನಾಯಕನನ್ನು ಆಯ್ಕೆ ಮಾಡುವ ಹೊಣೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಜನರ ಮೇಲಿದೆ ಎಂದರು.
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ನಡೆಸುತ್ತಿರುವ ಸಾಂಪ್ರದಾಯಕ ಶೈಲಿಯ ಮತ ಪ್ರಚಾರ ಮತದಾರರ ಗಮನ ಸೆಳೆದಿದೆ. ಅಧಿಕಾರವಿದ್ದರೂ ಜನರ ಗುಂಪು ಕಟ್ಟಿಕೊಳ್ಳದೇ ಊರೂರು ಸುತ್ತಿ ಮತ ಬೇಡುತ್ತಿದ್ದಾರೆ.
ಹಾಗೆಯೇ, ಅವರ ಪುತ್ರ ಡಾ.ಅಭಿಜ್ಞಾ, ಪತ್ನಿ ತ್ರಿವೇಣಿ ಅವರೂ ಕೂಡ ಪ್ರತ್ಯೇಕವಾಗಿ ಮನೆಮನೆಗೆ ಭೇಟಿ ನೀಡಿ ಮತ ಕೇಳುತ್ತಿದ್ದಾರೆ. ಉಳಿದೆರಡು ಪಕ್ಷಗಳ ಪ್ರಬಲ ಪೈಪೋಟಿಯ ನಡುವೆ ಬಿಜೆಪಿ ಗೆಲುವಿಗೆ ವಿಶೇಷ ಕಸರತ್ತು ನಡೆಸುತ್ತಿದೆ.