ತಿಪಟೂರಿನಲ್ಲಿ ಜನ ಶತಾಬ್ದಿ ರೈಲು ನಿಲುಗಡೆ; ರೈಲ್ವೇ ಸಚಿವಾಲಯ ಅನುಮೋದನೆ

TrainNew
Published on

ತುಮಕೂರು: ಹುಬ್ಬಳ್ಳಿ-ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12079/80) ಹಾಗೂ ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ (ರೈಲು ಸಂಖ್ಯೆ 12089/90) ರೈಲುಗಳಿಗೆ ತಿಪಟೂರು ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೇ ಸಚಿವಾಲಯ ಅನುಮೋದನೆ ನೀಡಿದೆ.


ಈ ರೈಲುಗಳ ನಿಲುಗಡೆ ತಿಪಟೂರು ಜನರ ಬಹುಕಾಲದ ಬೇಡಿಕೆಯಾಗಿದ್ದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಾರ್ವಜನಿಕರ ಬೇಡಿಕೆ ಈಡೇರಿಕೆಗೆ ವಿಶೇಷ ಮುತುವರ್ಜಿ ವಹಿಸಿದ್ದಾರೆ.


ತಿಪಟೂರು ನಗರ ತುಮಕೂರು ಜಿಲ್ಲೆಯ ಪ್ರಮುಖ ಕೃಷಿ, ವ್ಯಾಪಾರ, ವಾಣಿಜ್ಯ ಕೇಂದ್ರವಾಗಿದ್ದು ಈ ರೈಲುಗಳ ನಿಲುಗಡೆಯಿಂದ ಈ ಭಾಗದ ಸಾರ್ವಜನಿಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಹುಬ್ಬಳ್ಳಿ, ಶಿವಮೊಗ್ಗ, ಬೆಂಗಳೂರಿಗೆ ಪ್ರಯಾಣಿಸಲು ಇನ್ನಷ್ಟು ಸುಗಮವಾಗಲಿದೆ.


ರೈಲುಗಳ ಈ ನಿಲುಗಡೆಗೆ ಶೀಘ್ರವೇ ಚಾಲನೆ ನೀಡಲಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಚಿವ ಸೋಮಣ್ಣ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net