

ತುಮಕೂರು: ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗಲು ಪ್ರತಿಯೊಬ್ಬರೂ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ನಮ್ಮ ದೇಶದ ಪ್ರಜಾಪ್ರಭುತ್ವ ಉಳಿಸಬೇಕಾದರೆ ಎಲ್ಲರೂ ಮತದಾನಲ್ಲಿ ಪಾಲ್ಗೊಳ್ಳಬೇಕು. ಯಾರು ಯಾವುದಕ್ಕೆ ಬೇಕಾದರೂ ಮತ ಚಲಾಯಿಸುವ ಅಧಿಕಾರ ಇದರೆ. ಆದರೆ, ತಪ್ಪದೇ ಮತಗಟ್ಟೆಗಳಿಗೆ ಬಂದು ಕಡ್ಡಾಯವಾಗಿ ಮತದಾನ ಮಾಡಬೇಕು. ಈ ಅವಕಾಶದಿಂದ ಯಾರೂ ವಂಚಿತರಾಗಬಾರದು ಎಂದರು.
ನಗರದ ಶಾಂತಿನಗರದಲ್ಲಿ ಎ.ಎಸ್.ಕೆ.ಪಾಳ್ಯದ ಕಾವೇರಿ ಪೂರ್ವ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮತದಾರರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದೆ ಎಂದರು.
ಮೇ.10 ರಂದು ರಜೆ ದಿನ ಎಂದು ಯಾರೂ ಸಹ ಹೊರಗಡೆ ಹೋಗಿ ರಿಲ್ಯಾಕ್ಸ್ ಮಾಡುವ ಕೆಲಸ ಮಾಡಬಾರದು. ಎಲ್ಲರೂ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಬೇಕು ಎಂದರು.
ರಾಜ್ಯ ಮಟ್ಟದಲ್ಲಿ ಒಂದೇ ರೀತಿಯ `ಪ್ರಜಾಪ್ರಭುತ್ವದ ಹಬ್ಬ' ಮೇ.10 ಮತದಾನ ಎಂಬ ಧ್ಯೇಯವಾಕ್ಯ ಒಳಗೊಂಡಿರುವ ಬಾವುಟ ಸಿದ್ಧಪಡಿಸಿದ್ದು, ಇಂದು ಪ್ರತಿ ಮತಗಟ್ಟೆಗಳಿರುವ ಪ್ರದೇಶಾವಾರು ಧ್ವಜಾರೋಹಣ ನೆರವೇರಿಸಲಾಗಿದೆ, ಮೇ.10 ರಂದು ವಿಧಾನಸಭಾ ಚುನಾವಣೆ ನಡೆದ ಬಳಿಕ ಈ ಬಾವುಟ ತೆಗೆಯಲಾಗುವುದು ಎಂದರು.