

ತುಮಕೂರು: ಗ್ರಾಮೀಣ ಉಪವಿಭಾಗ-1ರ ಕೋರಾ, ಬೆಳ್ಳಾವಿ ಮತ್ತು ಸಿಟಿ ಕೆರೆ ಶಾಖಾ ವ್ಯಾಪ್ತಿಯ ಗ್ರಾಹಕರು 2014ನೇ ಸಾಲಿನಿಂದ ಈವರೆಗಿನ ಜೇಷ್ಠತಾ ಪಟ್ಟಿಯಲ್ಲಿ ಯುಎನ್ಐಪಿ ನೀರಾವರಿ ಪಂಪ್ಸೆಟ್ನ ಆರ್ಆರ್ ಸಂಖ್ಯೆ ಬಿಟ್ಟುಹೋಗಿದ್ದಲ್ಲಿ ಮಾ.21ರೊಳಗೆ ಅಗತ್ಯ ದಾಖಲೆಗಳನ್ನು ಸಂಬಂಧಿಸಿದ ಶಾಖಾ ಕಚೇರಿಗೆ ಸಲ್ಲಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.