

ತುಮಕೂರು: ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದ ಆವರಣದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ನಡೆಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಟಿ.ಎಲ್.ನರಸಿಂಹಯ್ಯ, ಶಿವಮ್ಮ ದಂಪತಿ ಅವರ ಪುತ್ರಿ, ತುಮಕೂರು ವಿವಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ 5ನೇ ರ‍್ಯಾಂಕ್ ಪಡೆದಿರುವ ವಿನುತಾ ಅವರನ್ನು ಸನ್ಮಾನಿಸಲಾಯಿತು.
ರಾಜ್ಯಾಧ್ಯಕ್ಷ ಶಂಭುಲಿಂಗ ಜಿಲ್ಲಾಧ್ಯಕ್ಷ ಚೆಲುವರಾಜು, ಸದಸ್ಯರಾದ ಗಿರೀಶ್, ಕ್ಯಾತಸಂದ್ರ ಕೃಷ್ಣಪ್ಪ, ರುದ್ರೇಶ್, ಆನಂದ್‌ಜೈನ್ ಮತ್ತಿತರರು ಇದ್ದರು.