

ತುಮಕೂರು: ಗೃಹ ಸಚಿವರ ತವರು ಜಿಲ್ಲೆ ತುಮಕೂರು ಅಪರಾಧ ಚಟುವಟಿಕೆಗಳಿಗೆ ಸುದ್ದಿಯಾಗುತ್ತಿದೆ, ಪುಡಿರೌಡಿಗಳು ಬಾಲ ಬಿಚ್ಚಲಾರಂಭಿಸಿದ್ದರೂ ಪೊಲೀಸರು ಶಾಂತರಾಗಿರುವುದು ಆಶ್ಚರ್ಯ ಮೂಡಿಸಿದೆ.
ಗಾಂಜಾ ಹಾಗೂ ಡ್ರಗ್ಸ್ ಎಗ್ಗಿಲ್ಲದೆ ಮಾರಾಟವಾಗುತ್ತಿದೆ ಎಂಬ ಅಘಾತಕಾರಿ ಸುದ್ದಿಯ ನಡುವೆಯೇ ಶುಕ್ರವಾರ ತಡರಾತ್ರಿ ಹುಡುಗಿ ವಿಚಾರಕ್ಕೆ ಯುವಕರ ನಡುವೆ ಶುರುವಾದ ಕಿರಿಕ್ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.
ಕಳೆದ ಒಂದೂವರೆ ತಿಂಗಳಲ್ಲಿ ನಗರದಲ್ಲಿ ಮೂರು ಬಾರಿ ಮಚ್ಚು, ಲಾಂಗುಗಳು ಝಳಪಿಸಿವೆ. ಇತ್ತೀಚೆಗಷ್ಟೇ ಡ್ರಗ್ಸ್ ನಶೆಯಲ್ಲಿದ್ದ ಯುವಕನೊಬ್ಬ ಹುಡುಗಿಯ ವಿಚಾರಕ್ಕೆ ಇನ್ನೊಬ್ಬ ಯುವಕನ ಮೇಲೆ ಮಚ್ಚಿನ ದಾಳಿ ನಡೆಸಿದ್ದ ಘಟನೆ ಸದಾಶಿವನಗರದಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ನಗರದ ಮರಳೂರು ದಿಣ್ಣೆಯಲ್ಲಿ ಮತ್ತೊಂದು ಭೀಕರ ಕೊಲೆ ನಡೆದುಹೋಗಿದೆ.
ಸಾದಿಕ್ ಎಂಬ ಎಂಬಾತದಿಂದ ರಿಹಾನ್ಪಾಷ(20) ಕೊನೆಯಾದ ಯುವಕ, ಕೊಲೆಗೆ ಹುಡುಗಿಯ ವಿಷಯ ಕಾರಣ ಎನ್ನಲಾಗಿದೆ. ಶುಕ್ರವಾರ ರಾತ್ರಿ ಮೊಬೈಲ್ಗೆ ಕರೆ ಮಾಡಿ ರಿಹಾನ್ನನ್ನು ಮನೆಯಿಂದ ಹೊರೆಗೆ ಕರೆಸಿಕೊಂಡ ಸಾದಿಕ್ ಚಾಕುವಿನಿಂದ ಚುಚ್ಚಿ ಪರಾರಿಯಾಗಿನೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದು ಒದ್ದಾಡುತಿದ್ದ ರಿಹಾನ್ ಪಾಷ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.
ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು 6 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.