ಎಂಪ್ರೆಸ್ ಸರ್ಕಾರಿ ಶಾಲೆಗೆ ರಿತೇಶಕುಮಾರ್ ಸಿಂಗ್ ದಿಢೀರ್ ಭೇಟಿ; ಶಿಕ್ಷಣ ಇಲಾಖೆ ಅಧಿಕಾರಿಗಳ ಸಾಥ್

TMK_IAS_Rethesh1111
Published on

ತುಮಕೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ್ ಸಿಂಗ್ ನಗರದ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಗೆ ಶನಿವಾರ ದಿಢೀರ್ ಭೇಟಿ ನೀಡಿ ಮಾಹಿತಿ ಪಡೆದರು.

ಕೆಪಿಎಸ್‌ಗೆ ಭೇಟಿ ನೀಡಿ ಶಾಲೆಯ ಪರಿಸರ, ವರ್ಗಕೋಣೆಯ ಸ್ವಚ್ಛತೆ, ಗ್ರಂಥಾಲಯಗಳ ನಿರ್ವಹಣೆ, ಶೌಚಾಲಯ, ಪ್ರಯೋಗಾಲಯಗಳ ನಿರ್ವಹಣೆ ಪರಿಶೀಲಿಸಿದರು.

ಪ್ರೌಢಶಾಲಾ ವಿಭಾಗದಲ್ಲಿ ಎನ್‌ಎಸ್‌ಕ್ಯೂಎಫ್ ಅಡಿಯಲ್ಲಿ ನಡೆಯುತ್ತಿದ್ದ ಐಟಿ ತರಗತಿಗೆ ಭೇಟಿ ನೀಡಿ ಅಲ್ಲಿನ ತರಗತಿ ನಿರ್ವಹಣೆ, ವಿದ್ಯಾರ್ಥಿಗಳ ಕಲಿಕೆ, ಸಾಮಾಗ್ರಿಗಳ ಜೋಡಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು, ಓದಿನ ಮಹತ್ವ, ಓದುವ ಕ್ರಮ ಹಾಗೂ ಜೀವನ ಕೌಶಲ ಕುರಿತಂತೆ ಸಲಹೆ ನೀಡಿದರು.

ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಾಣವಾಗಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಗ್ರಂಥಾಲಯ ನಿರ್ವಹಣೆ ಪರಿಶೀಲಿಸಿದರು. ಗ್ರಂಥಾಲಯದಲ್ಲಿ ಇರುವ ಸಭಾಂಗಣವನ್ನು ಮಕ್ಕಳ ಕಾರ್ಯಕ್ರಮಗಳಿಗೆ ಬಳಸುವಂತೆ ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಹಾಗೂ ಅಧ್ಯಯನಶೀಲತೆ ಹೆಚ್ಚಿಸುವ ಪುಸ್ತಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಹಾಗೂ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಿತರಿಸಲು ಸೂಚಿಸಿದರು.

ಜಿಲ್ಲಾಧಿಕಾರಿ ಶುಭಕಲ್ಯಾಣ್, ಡಿಡಿಪಿಐ ರಂಗಧಾಮಯ್ಯ, ಬಿಇಒ ಡಾ.ಸೂರ್ಯಕಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net