

ತುಮಕೂರು: ರಾಜ್ಯದ ಹುಣಸೆ ಹಣ್ಣಿನ ಕಣಜ ಎಂದು ಹೆಸರು ಪಡೆದು ಪ್ರತಿವರ್ಷ ನೂರಾರು ಕೋಟಿ ರೂ. ವಹಿವಾಟು ನಡೆಸುತ್ತಿದ್ದ ತುಮಕೂರು ತಾಲೂಕು ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿನಿತ್ಯ ಹುಣಸೆ ಮರ ನಾಶಗೊಳಿಸುತ್ತಿರುವ ಕಹಿ ಘಟನೆಗಳು ನಡೆಯುತ್ತಿವೆ.
ದೇಶದಲ್ಲಿ ಅಪರೂಪವಾದ 100-200 ಹುಣಸೆ ಮರಗಳ ತೋಪುಗಳನ್ನು ಕೊರಟಗೆರೆ, ಮಧುಗಿರಿ, ಶಿರಾ ಮತ್ತು ಪಾವಗಡ ತಾಲೂಕುಗಳಲ್ಲಿ ಇಂದಿಗೂ ನೋಡ ಬಹುದು. ಕೆಲವು ರೈತರ ಜಮೀನಿನಲ್ಲಿ 200-300 ವರ್ಷಗಳ ಹುಣಸೆ ಮರಗಳಿದ್ದು, ಅಂತಹ ಮರಗಳಲ್ಲಿ ಸಿಗುವ ಇಳುವರಿಯಲ್ಲಿ ಸಹೋದರರಗಳಿಗೆ ಹಂಚಿಕೆಯಿದೆ, ಪಹಣಿಯಲ್ಲಿಯೂ ನಮೂದಾಗಿರುವ ನೂರಾರು ಉದಾಹರಣೆ ಕೂಡ ಸಿಗುತ್ತವೆ.
ಮೀತಿ ಮೀರಿದ ಖರ್ಚು, ಕಾರ್ಮಿಕರ ಕೊರತೆ, ಖಚಿತ ಬೆಲೆ ನಾಪತ್ತೆ, ಬೆಲೆ ಕುಸಿತ, ಕಡಿಮೆ ಆದಾಯ ಈಗಾಗಲೇ ಹಲವು ಸಾವಿರ ಮರಗಳು ಕಣ್ಮರೆಯಾಗಿವೆ. ನೂರಾರು ವರ್ಷಗಳಿಂದ ಮಳೆ ಆಶ್ರಯದ ಬೆಳೆಯಾಗಿ ಸರ್ಕಾರಕ್ಕೆ ಹೊರೆಯಾಗದೇ ರೈತನ ಜೀವನಕ್ಕೆ ದಾರಿಯಾಗಿತು.
ಬೆಳೆಗಾರರ ಸಮಸ್ಯೆಗಳು:
1.ಅನುಭವಿ ಮರ ಹತ್ತಿ ಬಡಿಯುವವರು ಮತ್ತು ಸಂಸ್ಕರಣೆ ಮಾಡಲು ಕೃಷಿ ಕಾರ್ಮಿಕರ ಕೊರತೆ
2.ಮರದ ಹಣ್ಣನ್ನು ಇಳಿಸಲು (ಬಡಿಯಲು) ಮತ್ತು ಸಂಸ್ಕರಣೆ ಮಾಡಲು ಸರಳವಾದ ಯಂತ್ರಗಳ ಸಂಶೋದನೆ ಅವಶ್ಯಕತೆ
3 ಸಂಸ್ಕರಣೆ ಸಮಯದಲ್ಲಿ ವಾತವರಣದಲ್ಲಿ ದಟ್ಟ ಮೊಡ ಕವಿದಾಗ ಹಣ್ಣು ತೇವಾಂಶ ತೆಗೆದು ಕೊಳ್ಳುವುದು
4.ತುಮಕೂರುನಲ್ಲಿ ವ್ಯವಸ್ಥಿತವಾದ ರಿಯಾಯಿತಿ ದರದಲ್ಲಿ ಕೋಲ್ಡ್ ಸ್ಟೋರೇಜ್ ಅವಶ್ಯಕತೆ
7.ಮೌಲ್ಯ ವರ್ಧನೆ ಬಗ್ಗೆ ಹೊಸ ಸಂಶೋಧನೆ ನಡೆಸ ಬೇಕು
ಮೇಲಿನ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ಚರ್ಚಿಸಿ ಸಾಧ್ಯವಾದಷ್ಟು ಪರಿಹಾರ ಕೊಂಡುಕೊಳ್ಳಲು ರೈತರೇ ಕಾರ್ಯಾಗಾರ ಹಮ್ಮಿಕೊಂಡಿದ್ದು ರಾಜ್ಯದ ಅನೇಕರು ಭಾಗವಹಿಸಿ ವಿಷಯಗಳ ಮಂಡನೆ ಮಾಡಲಿದ್ದಾರೆ. ಈ ಬಗ್ಗೆ ಸಮಸ್ಯೆಗಳು-ಸೂಕ್ತವಾದ ಪರಿಹಾರಗಳು- ಮೌಲ್ಯ ವರ್ಧನೆ ಮಾರ್ಗಗಳು ಮತ್ತು ಸರಳ ಯಂತ್ರಗಳ ಮಾಹಿತಿಯಿದ್ದರೆ ರೈತರಿಂದ ಮಾಹಿತಿ ಆಹ್ವಾನಿಸಲಾಗಿದೆ.
ಮಾಹಿತಿಗೆ ಎಚ್.ಜೆ.ಪದ್ಮರಾಜು, ತೋವಿನಕೆರೆ, ತುಮಕೂರು ತಾಲೂಕು. ಮೊ. 9945323787 ಸಂಪರ್ಕಿಸಬಹುದು.