

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಸರ್ಕಾರಿ ಪದವಿ ಕಾಲೇಜು ಎನ್‌ಎಸ್‌ಎಸ್ ಘಟಕದ ವತಿಯಿಂದ ವಾರ್ಷಿಕ ವಿಶೇಷ ಶಿಬಿರ ದಸೂಡಿ ಗ್ರಾಮದಲ್ಲಿ ಆರಂಭವಾಯಿತು.
ಶಾಸಕ ಸಿ.ಬಿ.ಸುರೇಶ್‌ಬಾಬು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಶಿಬಿರದ ವಿದ್ಯಾರ್ಥಿಗಳು ಗ್ರಾಮದ ಜನರೊಂದಿಗೆ ಬೆರೆತು ಊರಿನ ವಾತಾವರಣದೊಂದಿಗೆ ಬೆರೆತು ಹೊಂದಿಕೊಳ್ಳಬೇಕು. ಅವರ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.
ಗ್ರಾಪಂ ಸದಸ್ಯ ಡಿ.ಬಿ.ರವಿಕುಮಾರ್, ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಟಿ.ರುದ್ರೇಶ್, ಪ್ರಾಚಾರ್ಯ ಪ್ರೊ.ಎಸ್.ಸಿ.ವೀರಣ್ಣ, ಶಿಬಿರದ ಸಂಯೋಜಕಿ ಡಾ.ಬಿ.ಜಯಶ್ರೀ, ಸಂಯೋಜನಾಧಿಕಾರಿ ಪ್ರೊ.ಮಲ್ಲಿಕಾರ್ಜುನ್, ಪ್ರಾಧ್ಯಾಪಕ ಡಾ.ಮೋಹನ್ ಕುಮಾರ್ ಮಿರ್ಲೆ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಬಿ.ಯೋಗೀಶ್ ಇದ್ದರು.