ಆನ್​ಲೈನ್​ ಅರ್ಜಿ ಆಹ್ವಾನ

Kavital Kasturaba Gandhi Girls Hostel
ಪಾಮನಕಲ್ಲೂರಿನಲ್ಲಿ ನಿರ್ಮಿಸಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಸತಿನಿಲಯ ಕಟ್ಟಡದ ಹೊರನೋಟ.
Published on

ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಮೆಟ್ರಿಕ್​ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಪಿಯುಸಿ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸತ್ಯಮಂಗಲದ ಸಾರ್ವಜನಿಕ ಮಾದರಿ ಮೆಟ್ರಿಕ್​ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಕುಣಿಗಲ್​ ರಸ್ತೆ ಮೆಟ್ರಿಕ್​ ನಂತರ ವೃತ್ತಿಪರ ಬಾಲಕರ ವಿದ್ಯಾರ್ಥಿನಿಲಯ, ಸೋಮೇಶ್ವರ ಬಡಾವಣೆ, ದಿಬ್ಬೂರು, ಗಾರ್ಡನ್​ರಸ್ತೆ, ಕುಣಿಗಲ್​ ರಸ್ತೆ ಹಾಗೂ ಕೋತಿತೋಪಿನಲ್ಲಿರುವ ಮೆಟ್ರಿಕ್​ ನಂತರ ಬಾಲಕರ ವಿದ್ಯಾರ್ಥಿನಿಲಯ; ರೈಲ್ವೇಸ್ಟೇಷನ್​ ರಸ್ತೆ, ಉಪ್ಪಾರಹಳ್ಳಿ, ಶಿರಾಗೇಟ್​ ರಸ್ತೆಯ ಸಾಯಿ ಬಡಾವಣೆ, ಸರಸ್ವತಿಪುರಂ, ಶಿರಾಗೇಟ್​ ಅರಳೀಮರದ ಪಾಳ್ಯದ ಮೆಟ್ರಿಕ್​ ನಂತರ ಬಾಲಕಿಯರ ವಿದ್ಯಾರ್ಥಿನಿಲಯ, ರೈಲ್ವೇಸ್ಟೇಷನ್​ ರಸ್ತೆ ಹಾಗೂ ಕುಣಿಗಲ್​ ರಸ್ತೆಯ ಮೆಟ್ರಿಕ್​ ನಂತರ ವೃತ್ತಿಪರ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರವರ್ಗ-1, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ವರಮಾನ 2.50ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ವರಮಾನ 1 ಲಕ್ಷ ರೂ. ಮಿತಿಯೊಳಗಿರಬೇಕು. ಆಸಕ್ತ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ಜೂನ್​ 20ರೊಳಗಾಗಿ ಜಾಲತಾಣ ಮೂಲಕ ಸಲ್ಲಿಸಬಹುದು.

. ಮಾಹಿತಿಗೆ ದೂ.0816- 2251736 ಅಥವಾ ಸಹಾಯವಾಣಿ 8050770004, 8050770005 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net