

ತುಮಕೂರು: ತೋಟಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಹಾಗೂ ಯಂತ್ರೀಕರಣ ಯೋಜನೆಗಳಡಿ ತೋಟಗಾರಿಕೆ ರೈತರು ಹಾಗೂ ಉದ್ದಿಮೆದಾರರಿಗೆ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ರೈತರು ಹಾಗೂ ಉದ್ದಿಮೆದಾರರು ತಮ್ಮ ಅರ್ಜಿಯೊಂದಿಗೆ ಪಹಣಿ, ಆಧಾರ್, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಜಾತಿ ಪ್ರಮಾಣ ಪತ್ರ, ಮತ್ತಿತರ ದಾಖಲಾತಿಗಳನ್ನು ಜುಲೈ 31ರೊಳಗಾಗಿ ತೋಟಗಾರಿಕೆ ಕಚೇರಿಗೆ ಸಲ್ಲಿಸಬಹುದು.
ಮಾಹಿತಿಗೆ ದೂ.0816 244189 ಸಂಪರ್ಕಿಸಿ.