ಮನೆ ಕೊಡಿಸುವುದಾಗಿ ಹಣ ವಸೂಲಿ

Jyothi_Ganesh
Published on

ತುಮಕೂರು: ನಗರದ ಹೊನ್ನೇನಹಳ್ಳಿಯಲ್ಲಿ ಪೌರಕಾರ್ಮಿಕರು ಹಾಗೂ ವಸತಿ ವಂಚಿತ ಅಲೆಮಾರಿಗಳಿಗೆ ಮನೆಗಳ ನಿರ್ಮಾಣ ಕಾಮಗಾರಿ ಶ್ರೀಘ್ರ ಪೂರ್ಣವಾಗಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್​ ಭರವಸೆ ವ್ಯಕ್ತಪಡಿಸಿದ್ದಾರೆ.

ಅರ್ಜಿದಾರರುಗಳು, ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳು ನಾವೇ ಮನೆ ಕೊಡಿಸುವುದಾಗಿ ಆಮಿಷ ಒಡ್ಡಿದರೆ ಹಾಗೂ ಹಣ ವಸೂಲಿ ಮಾಡಿ ದಿಕ್ಕು ತಪ್ಪಿಸುವ ದೂರುಗಳಿದ್ದು ಜನರು ಎಚ್ಚರವಾಗಿರಬೇಕು, ಈ ಬಗ್ಗೆ ಯಾರಾದರೂ ಸಂಪರ್ಕಿಸಿದರೆ ಸ್ಥಳಿಯ ಪೊಲೀಸ್​ ಠಾಣೆ ಅಥವಾ ನೇರವಾಗಿ ಶಾಸಕರ ಕಚೇರಿ ಸಂಪರ್ಕಿಸುವಂತೆ ಎಂದು ಮನವಿ ಮಾಡಿದ್ದಾರೆ.

ವಾರ್ಡ್​ ನಂ.01ರ ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂ.44ರಲ್ಲಿ 1 ಎಕರೆ 39 ಗುಂಟೆ ಸರ್ಕಾರಿ ಜಾಗದಲ್ಲಿ ಪ್ರಧಾನಮಂತ್ರಿ ಆವಾಜ್​ ಯೋಜನೆಯಡಿ 1450 ಮನೆ ನಿರ್ಮಿಸಲು ಉದ್ದೇಶಿಸಲಾಗಿದ್ದು ಈಗಾಗಲೇ ಕೊಳಚೆ ನಿಮೂರ್ಲನಾ ಮಂಡಳಿ ವತಿಯಿಂದ 194 ಮನೆ ನಿಮಾರ್ಣ ಕಾರ್ಯ ಪ್ರಗತಿಯಲ್ಲಿದೆ.

ಈ ಯೋಜನೆಯಡಿ ತುಮಕೂರು ಮಹಾನಗರ ಪಾಲಿಕೆ ಪೌರಕಾರ್ಮಿಕರಿಗೆ ಮತ್ತು ತುಮಕೂರು ನಗರದ ಕುಮುಟಯ್ಯ ಬಡಾವಣೆ ಪಾರ್ಕ್​ನಲ್ಲಿ ವಾಸಿಸುತ್ತಿರುವ ಅಲೆಮಾರಿಗಳಿಗೆ ಹಾಗೂ ಅಮಾನಿಕೆರೆಯ ಕೋಡಿಹಳ್ಳದಲ್ಲಿರುವ ವಸತಿ ವಂಚಿತರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ.

ಅರ್ಹ ಫಲಾನಿಭವಿಗಳ ಪಟ್ಟಿ ಆಶ್ರಯ ಸಮಿತಿಯ ಸಭೆಯಲ್ಲಿ ಅನುಮೋದನೆಗೊಂಡ ನಂತರ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net