

ತುಮಕೂರು: ಕಾಂಗ್ರೆಸ್ ಅಧಿಕಾರವಧಿಯಲ್ಲಿ ಕೊಲೆ ಪ್ರಕರಣ ಹೆಚ್ಚಾಗಿವೆ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಾನು ಅವರಿಗೆ ಲೆಕ್ಕ ಕೊಡ್ತಿನಿ, ಅವರ ಸರ್ಕಾರ ಇದ್ದಾಗ ಎಷ್ಟು ಕೊಲೆಯಾಗಿದೆ ಎಷ್ಟು ರೇಪ್ ಆಗಿದೆ ಎಂದು ತಿರುಗೇಟು ನೀಡಿದರು.
ನಮ್ಮ ಸರ್ಕಾರದಲ್ಲಿ ಯಾರೆ ಕೊಲೆ ಮಾಡಲಿ ಅಥವಾ ಮತ್ತೊಂದು ಅಪರಾಧ ಪ್ರಕರಣ ಮಾಡಿಕೊಳ್ಳಲಿ ಕೂಡಲೇ ಹಿಡಿದು ಶಿಕ್ಷೆ ಮಾಡ್ತಿದಿವಿ ಹಾಗಾಗಿ, ಅವರು ಹೇಳಿದಕ್ಕೆಲ್ಲಾ ನಾನು ಉತ್ತರ ಕೊಡುವುದಿಲ್ಲ ಎಂದರು.
ಚುನಾವಣೆಯಲ್ಲಿ 136 ಸೀಟು ಗೆದ್ದು ಜೋಶ್ ನಲ್ಲಿದ್ದೇವೆ, ಅತ್ತುಕೊಂಡು ಕೂಳಿತುಕೊಳ್ಳಬೇಕಾ? ಬಿಜೆಪಿಯವರನ್ನು ಗೆಲ್ಲಸಲಿಲ್ಲ, ಅಧಿಕಾರದಿಂದ ಜನರೇ ಆಚೆಯಾಕಿದ್ದಾರೆ ಹೊಟ್ಟೆಯುರಿಗೆ ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಜೈನಮುನಿ ಕೊಲೆ ಪ್ರಕರಣದಲ್ಲಿ ಘಟನೆ ನಡೆದು 6 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ, ತನಿಖೆ ಕೂಡ ನಡೆಯುತ್ತಿದೆ. ಬೆಂಗಳೂರು ಜೋಡಿ ಕೊಲೆಯಲ್ಲಿ ಭಾಗಿಯಾದವರನ್ನು 7 ಗಂಟೆಗಳಲ್ಲಿ ಕುಣಿಗಲ್‌ನಲ್ಲಿ ಬಂಧಿಸಿದ್ದೇವೆ ಅಪರಾಧ ಪ್ರಕರಣ ತಡೆಯಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.