ಜಿಲ್ಲೆಯಲ್ಲಿ ಭರ್ಜರಿ ಮುಂಗಾರು ಮಳೆ

R
Published on

ತುಮಕೂರು: ಜಿಲ್ಲೆಯಲ್ಲಿ ಮುಂಗಾರುಮಳೆ ಆರ್ಭಟ ಮುಂದುವರಿದಿದ್ದು ಬುಧವಾರ ಹಾಗೂ ಗುರುವಾರ ರಾತ್ರಿ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಭರ್ಜರಿ ಮಳೆ ಸುರಿದಿದ್ದು ತುಮಕೂರು ಹಾಗೂ ಗುಬ್ಬಿ ತಾಲೂಕಿನಲ್ಲಿ ರಸ್ತೆಗಳು ಕುಸಿದ ವರದಿಯಾಗಿದೆ.

ತುಮಕೂರಿನಿಂದ ಶಿರಾಗೇಟ್‌ಗೆ ಸಂಪರ್ಕಿಸಲು ಅಮಾನಿಕೆರೆ ಕೋಡಿಯಲ್ಲಿ ಲಘು ವಾಹನಗಳ ಓಡಾಟಕ್ಕೆ ನಿರ್ಮಿಸಿದ್ದ ತಾತಕಾಲಿಕ ರಸ್ತೆ ಕುಸಿದ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಸ್ಥಳಕ್ಕೆ ಭೇಟಿ ಸಂಚಾರಕ್ಕೆ ರಸ್ತೆ ಯೋಗ್ಯವಾಗಿಲ್ಲದ ಕಾರಣದಿಂದ ತಾತ್ಕಾಲಿಕ ಸಂಚಾರಕ್ಕೂ ಬ್ರೇಕ್ ಹಾಕಿದರು.

ಗುಬ್ಬಿ ತಾಲೂಕಿನ ಎಂ.ಎA.ಎ ಕಾವಲï ತಗ್ಗು ಪ್ರದೇಶದಲ್ಲಿರುವ ಕೆಲವು ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದ್ದು ಶಾಸಕ ಎಸ್.ಆರ್.ಶ್ರೀನಿವಾಸ್ ರಾತ್ರಿಯೇ ಸ್ಥಳಕ್ಕೆ ತೆರಳಿ ನಿರಾಶ್ರಿತರಿಗೆ ತಾತ್ಕಾಲಿಕ ಪರಿಹಾರ ಒದಗಿಸಿದ್ದಾರೆ.

ಬುಧವಾರ ರಾತ್ರಿ ಗುಬ್ಬಿ ತಾಲೂಕು ಚೇಳೂರಿನಲ್ಲಿ 4ಮಿಮೀ, ಅಂಕಸAದ್ರ 9.8, ಸಿ.ಎಸ್.ಪುರ 8, ಗುಬ್ಬಿ 12 ಹಾಗೂ ಕಡಬದಲ್ಲಿ 10.8ಮಿಮೀ ಮಳೆಯಾಗಿದೆ. ಕುಣಿಗಲ್‌ನಲ್ಲಿ 15, ಮಾರ್ಕನಹಳ್ಳಿ 7.1, ಅಮೃತೂರು 4.4, ಸಂತೇಪೇಟೆ 37.2ಮಿಮೀ ಮಳೆ ಸುರಿದಿದೆ.

ಮಧುಗಿರಿಯಲ್ಲಿ 39, ಬಡುವನಹಳ್ಳಿ 15, ಬ್ಯಾಲ್ಯ 22.1, ಮಿಡಿಗೇಶಿ 2, ಕೊಡಿಗೇನಹಳ್ಳಿ 5.2, ಐ.ಡಿ.ಹಳ್ಳಿ 23.2, ತುರುವೇಕೆರೆ 2.4, ತಿರುಮಣಿ 4, ತುಮಕೂರು 16.6, ರೈಲ್ವೆ ನಿಲ್ದಾಣ 12, ಬೆಳ್ಳಾವಿ 32, ಹೆಬ್ಬೂರು 4, ಊರ್ಡಿಗೆರೆ 15.1, ಹಿರೇಹಳ್ಳಿ 28.8, ನೆಲಹಾಲ್ 45ಮಿಮೀ ಮಳೆಯಾಗಿದೆ.
ಕೊರಟಗೆರೆ 36, ತುಂಬಾಡಿ 56.6, ಹೊಳವನಹಳ್ಳಿ 11.6, ಮಾವತ್ತೂರು 9.8, ಇರಕಸಂದ್ರ 23.6, ಕೊಳಾಲ 39.4, ತೋವಿನಕರೆ 36.8, ಸಂಪಿಗೆಯಲ್ಲಿ 6.8ಮಿಮೀ ಮಳೆ ಸುರಿದಿದೆ.

ಗುರುವಾರ ರಾತ್ರಿ ಕೂಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಿಂಚು, ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು ಮಳೆಯ ಪ್ರಮಾಣ ಇಂದು ಬೆಳಗ್ಗೆ ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net