ಮುಂಗಾರು ಮಳೆಗೆ ತುಮಕೂರಿನಲ್ಲಿ ಸಂಚಾರ ಅಸ್ತವ್ಯಸ್ತ; ಅಪಾಯದಲ್ಲಿ ರಸ್ತೆ ಸಂಚಾರ

RK
Published on

ತುಮಕೂರು: ಜಿಲ್ಲೆಯಲ್ಲಿ ಮುಂಗಾರ ಮುಳೆ ಜೋರಾಗಿದ್ದು ತುಮಕುರು ನಗರದಲ್ಲಿ ಸಂಚಾರ ಅವ್ಯವಸ್ಥೆಯ ಆಗರವಾಗಿದೆ. ಅಂಡರ್‌ಬ್ರಿಡ್ಜ್ಗಳು, ರಸ್ತೆಯಲ್ಲಿರುವ ತಗ್ಗು ಪ್ರದೇಶಗಳಲ್ಲಿ ಸಂಚಾರವೇ ಸ್ಥಗಿತವಾಗುತ್ತಿದೆ.

ಶುಕ್ರವಾರ ಸಂಜೆ ಬಿದ್ದ ಮಳೆಗೆ ಅಂತರಸನಹಳ್ಳಿ-ಯ¯್ಲÁಪುರದ ಮಧ್ಯದ ರಾಷ್ಟಿçÃಯ ಹೆz್ದÁರಿಯಲ್ಲಿ ನೀರು ಸಂಗ್ರಹವಾಗಿ ಸಂಚಾರವೇ ಸಾಧ್ಯವಾಗಲಿಲ್ಲ, ಸಣ್ಣ ಮಳೆ ಬಂದರೂ ರಸ್ತೆ ತುಂಬಿಕೊಳ್ಳುತ್ತಿದ್ದು ಜನರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಲಾರಂಭಿಸಿದ್ದಾರೆ.

ನಗರದ ಅಮಾನಿಕೆರೆ , ಕೋತಿತೋಪು, ಮಹಾತ್ಮಗಾಂಧೀ ರಸ್ತೆ, ಅಶೋಕ ರಸ್ತೆ, ಗುಬ್ಬಿ ಗೇಟ್ ಶೆಟ್ಟಿಹಳ್ಳಿ-ಕುಣಿಗಲï ರಸ್ತೆ ರಿಂಗ್‌ರಸ್ತೆಯ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಕೆರೆಯಂತೆ ನಿಲ್ಲುತ್ತಿದ್ದು ಶಾಲೆಯ ಮಕ್ಕಳು, ವೃದ್ಧರು ಬಿದ್ದು ಅಪಾಯಕ್ಕೆ ಸಿಲುಕುತ್ತಿರುವುದು ಸಾಮಾನ್ಯ ಎನ್ನಿಸುತ್ತಿದೆ.

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದಲೇ ಅನಾಹುತಗಳಿಗೆ ಕಾರಣವಾಗಿದೆ, ರಾಜಗಾಲುವೆ ಮತ್ತು ಚರಂಡಿಗಳಲ್ಲಿರುವ ಹೂಳು ತೆಗೆಯದ ಮಹಾನಗರಪಾಲಿಕೆ ಮೀನಾಮೇಷ ಎಣಿಸುತ್ತಿದೆ, ರಸ್ತೆಗಳಲ್ಲಿ ಚರಂಡಿಗಳಲ್ಲಿ ಗುಂಡಿಗಳಿದ್ದು ನೀರು ನಿಂತಾಗ ಕಾಣದೆ ಬಿಳುವ ಅಪಾಯ ಎಲ್ಲೆಡೆಯೂ ಇದೆ.

ಶುಕ್ರವಾರ ರಾತ್ರಿ ಪಾವಗಡದಲ್ಲಿ 15ಮಿಮೀ, ನಾಗಲಮಡಿಕೆ 20, ತಿರುಮಣಿ 11, ಅರಸೀಕೆರೆ 20.2, ವೈ.ಎನ್.ಹೊಸಕೋಟೆ 25.4, ಕೊರಟಗೆರೆ 58, ತುಂಬಾಡಿ 42.1, ಹೊಳವನಹಳ್ಳಿ 82.8, ಮಾವತ್ತೂರು 28.8, ಇರಕಸಂದ್ರಕಾಲೋನಿ 62.4, ಕೊಳಾಲ 32, ತೋವಿನಕೆರೆ 38.6ಮಿಮೀ ಮಳೆಯಾಗಿದೆ.

ತುಮಕೂರು 39.6, ರೈಲ್ವೆ ನಿಲ್ದಾಣ 45, ಬೆಳ್ಳಾವಿ 34, ಹೆಬ್ಬೂರು 5.3, ಊರ್ಡಿಗೆರೆ 16.1, ಹಿರೇಹಳ್ಳಿ 9.8, ನೆಲಹಾಲ್ 98, ತುರುವೇಕೆರೆ 36.6, ಸಂಪಿಗೆ 7, ಮಾಯಸಂದ್ರ 11.4, ದಂಡಿನಶಿವರ 3.2, ದಬ್ಬೇಘಟ್ಟ 13.3ಮಿಮೀ ಮಳೆಯಾಗಿದೆ.

ಗುಬ್ಬಿ 20, ಅಂಕಸAದ್ರ 55, ಸಿ.ಎಸ್.ಪುರ 6.4, ಚೇಳೂರು 30, ಕಡಬ 6.6, ಹಾಗಲವಾಡಿ 22, ನಿಟ್ಟೂರು 6.2, ಶಿರಾ 2, ಚಿಕ್ಕನಹಳ್ಳಿ 7, ಕಳ್ಳಂಬೆಳ್ಳ 20.5, ಬುಕ್ಕಾಪಟ್ಟಣ 7.2, ತಾವರೇಕೆರೆ 2, ಬರಗೂರು 8.6, ಹುಣುಸೇಹಳ್ಳಿ 7.2ಮಿಮೀ ಮಳೆ ಸುರಿದಿದೆ.

ತಿಪಟೂರು 7.6, ಕಿಬ್ಬನಹಳ್ಳಿನ 12, ನೊಣವಿನಕೆರೆ 13.2, ಹೊನ್ನವಳ್ಳಿ 2.9, ಹಾಲ್ಕುರಿಕೆ 3.2, ಮಧುಗಿರಿ 17.4, ಬಡುವನಹಳ್ಳಿ 6, ಬ್ಯಾಲ್ಯ 12, ಮಿಡಿಗೇಶಿ 2, ಕೊಡಿಗೇನಹಳ್ಳಿ 4.2, ಐ.ಡಿ.ಹಳ್ಳಿ 2.4ಮಿಮೀ ಮಳೆಯಾಗಿದೆ.

ಕುಣಿಗಲ್ 1.8, ಹುಲಿಯೂರುದುರ್ಗ 36, ಮಾರ್ಕನಹಳ್ಳಿ 2.3, ಕೆ.ಎಚ್.ಹಳ್ಳಿ 6.1, ಅಮೃತೂರು 18.3, ನಿಡಸಾಲೆ 23.4, ಸಿಂಗದಹಳ್ಳಿ 13, ದೊಡ್ಡ ಎಣ್ಣೆಗೆರೆ 3.1, ಮತಿಘಟ್ಟ 4.3, ಶೆಟ್ಟಿಕೆರೆ 3, ಹುಳಿಯಾರು 2.8, ಬೋರನಕಣಿವೆ 37.4ಮಿಮೀ ಮಳೆಯಾಗಿದ್ದು ಜಿಲ್ಲೆಯೆಲ್ಲೆಡೆ ಮುಂಗಾರು ಬಿತ್ತನೆ ಚುರುಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net