

ತುಮಕೂರು: ಕೊಬ್ಬರಿ ಬೆಳೆಗಾರರಿಗೆ ಸಾಕಷ್ಟು ಸಮಸ್ಯೆ ಇದೆ, ನನಗೆ 6 ತಿಂಗಳು ಸಮಯ ಕೊಡಿ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಟ ಬೆಂಬಲ ಬೆಲೆಯನ್ನು 16 ಸಾವಿರಕ್ಕೆ ಹೆಚ್ಚಿಸುತ್ತೇನೆ ಎಂದು ಕೇಂದ್ರ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ತೆಂಗು ಬೆಳೆಗಾರರಿಗೆ ಭರವಸೆ ನೀಡಿದ್ದಾರೆ.
ತುಮಕೂರಿನಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ತುಮಕೂರು ಸೇರಿದಂತೆ ತೆಂಗು ಬೆಳೆಯುವ ಭಾಗದ ರೈತರು ನನಗೆ ಶಕ್ತಿ ನೀಡಿದ್ದರಿಂದ ಇಂದು ಕೇಂದ್ರಮಂತ್ರಿಯಾಗಿದ್ದೇನೆ ಅವರ ಋಣ ತೀರಿಸುತ್ತೇನೆ ಎಂದರು.
ದೇಶದೆಲ್ಲೆಡೆ ಒಂದಲ್ಲ ಒಂದು ಭಾಗದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಶುರುಮಾಡಿದ್ದಾರೆ. ನನಗೆ ರೈತರನ್ನ ಉಳಿಸಬೇಕು ಎಂಬ ಚಿಂತನೆ ಇದೆ, ಕೊಬ್ಬರಿಗೆ ಕನಿಷ್ಠ ಒಂದು ಕ್ವಿಂಟಾಲïಗೆ 16 ಸಾವಿರ ರೂ. ಎಂಎಸ್‌ಪಿ ನಿರ್ಧರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ದೆಹಲಿ ರಾಜಕಾರಣನೇ ಬೇರೆ, ಇಲ್ಲಿನ ರಾಜಕಾರಣನೇ ಬೇರೆ, ಅಲ್ಲಿ ಹಿಂದಿಯಲ್ಲಿ ಮಾತಾಡಬೇಕು, ನನಗೆ ಹಿಂದಿ ಬರಲ್ಲ ಅಂದರೆ ನಡೆಯೋದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಿ.ಟಿ.ದೇವೆಗೌಡರು ಸ್ವಲ್ಪ ರೆಸ್ಟ್ ಮಾಡು ಇಲ್ಲದಿದ್ದರೆ ದೆಹಲಿಯಲ್ಲಿ ಹೇಗೆ ಕೆಲಸ ಮಾಡುತ್ತೀಯ ಎಂದು ಸಲಹೆ ನೀಡಿದರು ಆದೆ, ನಾನು ಹಿಂದಿನಿಂದಲೂ ಜನರೊಂದಿಗೆ ಇದ್ದು ಅಭ್ಯಾಸ ಮಾಡಿಕೊಂಡವನು. ನನ್ನ ಬಳಿ ಬರೋರೆಲ್ಲ ಕಷ್ಟದಲ್ಲಿ ಇರೋರು ಎಂದರು.