

ತುಮಕೂರು: ಕಾಂಗ್ರೆಸ್ನವರು ಎಷ್ಟೇ ಅಪಪ್ರಚಾರ ಮಾಡಿದರೂ ಚನ್ನಪಟ್ಟಣ ಜನತೆಯ ಆಶೀರ್ವಾದ ನಿಖಿಲ್ ಮೇಲಿದೆ, ಹೊಸದೊಡ್ಡಿ ಬಳಿ ಸೀರೆ, ಪಂಚೆ ಹಂಚಿರುವುದಕ್ಕೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ, ಇಂತಹ ಕೆಲಸ ಮಾಡೋರು ಕಾಂಗ್ರೆಸ್ನವರು. ಕಳೆದ ಚುನಾವಣೆಯಲ್ಲಿ ಯೋಗೀಶ್ವರ್ ಹಂಚಿದ್ದು, ಕಾಂಗ್ರೆಸ್ ಕಾರ್ಡ್ಗಳನ್ನು ನೋಡಿದ್ದೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದರು.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿ ಅವರು, ಈ ಚುನಾವಣೆಯಲ್ಲಿಯೂ ಕಾಂಗ್ರೆಸ್ ನಕಲಿ ಆರ್ ಕಾರ್ಡ್ ಹಂಚಲು ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿದರು.
ನಿಖಿಲ್ ಮದುವೆ ಸಂದರ್ಭದಲ್ಲಿ ಉಡುಗೊರೆ ನೀಡಬೇಕಿತ್ತು, ಕರೊನಾ ಕಾರಣದಿಂದ ಸಾಧ್ಯವಾಗಿರಲಿಲ್ಲ, ಆಗ ತಂದಿದ್ದವನ್ನೆಲ್ಲಾ ವಾಪಸ್ ನೀಡಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ನಾನು ರಾಜಕಾರಣ ಮಾಡೋನು. ಬಡವರನ್ನು ಹೆದರಿಸಿ ಭೂಮಿ ಕಬಳಿಸಿಕೊಂಡು ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಿದವನಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಬಡವರ ಜಮೀನು ಕಿತ್ತುಕೊಂಡು ಕಲ್ಲುಗಣಿಗಾರಿಕೆ ಮೂಲಕ ಪಾಪದ ಕೆಲಸ ಮಾಡಿದವರು ಅವರ, ಅವರ ಪಾಪದ ಕೆಲಸದ ವಿರುದ್ದ ಹೋರಾಟ ಮಾಡುತ್ತಿರೋರು ನಾವು. ಜನರು ಪಾಪದ ಕೆಲಸ ಮಾಡಿದವರಿಗೆ ಪಾಠ ಕಾಲಿಸಲು ಕಾದಿದ್ದು ಪ್ರತಿಲ ಅನುಭವಿಸುತ್ತಾರೆ ಎಂದರು.
ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಹೇಗೆ ಆಡಳಿತ ನಡೆಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅವರೇ ಬಹಿರಂಗವಾಗಿ ಮಾತನಾಡಿದ್ದಾರೆ, ಸಿಎಂ, ಡಿಸಿಎಂ ಅವರನ್ನು ಅಕ್ಕಪಕ್ಕದಲ್ಲಿ ಕೂರಿಸಿಕೊಂಡು ಪಾಠ ಮಾಡಿರುವುದನ್ನು ಗಮನಿಸಿದರೆ ಸಾಕು ರಾಜ್ಯದಲ್ಲಿ ಯಾವ ರೀತಿಯ ಆಡಳಿತ ನಡೆಯುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷದ ದುರಾಡಳಿತ ಆರಂಭವಾಗಿದ್ದು ದೇವಾಲಯದ ಆಸ್ತಿಯೂ ವಕ್ಫ್ ಬೋರ್ಡ್ ಹೆಸರಿನಲ್ಲಿ ಬರುತ್ತಿದೆ ಆದರೆ, ಕಾಂಗ್ರೆಸ್ ಪಕ್ಷದ ಅಕ್ರಮವನ್ನು ಮುಚ್ಚಿಕೊಳ್ಳಲು ಈ ವಿಷಯವನ್ನು ಮುನ್ನೆಲೆಗೆ ತಂದುಬಿಡಲಾಗಿದೆ. ಕೇಂದ್ರ ಕ್ಯಾಬಿನೆಟ್ ನಲ್ಲಿ ಏನಾಗಬೇಕೆಂದು ತಿರ್ಮಾನಿಸಲಾಗಿದೆ ಜತೆಗೆ ಈಗಾಗಲೇ ನ್ಯಾಯಾಲಯದಲ್ಲಿ ಕೂಡ ಚರ್ಚೆಗಳು ಆರಂಭವಾಗಿದ್ದು ಉತ್ತರ ಸಿಗಲಿದೆ ಎಂದರು.