

ತುಮಕೂರು: ಜೆಡಿಎಸ್ ಅಧಿಕಾರಕ್ಕೆ ಬಂದರೆ ಹಳ್ಳಿಯ ರೈತರ ಮಕ್ಕಳನ್ನು ಮದುವೆಯಾದರೆ 2 ಲಕ್ಷ ರೂ. ಸಹಾಯಧನ ಕೊಡುವ ಯೋಜನೆ ಜಾರಿಗೊಳಿಸುತ್ತೇವೆ ಎಂದು ತಿಪಟೂರಿನ ಪಂಚರತ್ನಯಾತ್ರೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಹಾಲ್ಕುರಿಕೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಳ್ಳಿಯ ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡಲ್ಲ ಹಾಗಾಗಿ, ರೈತರ ಮಕಳನ್ನು ಮದುವೆಯಾಗೋ ಹೆಣ್ಣು ಮಕ್ಕಳಿಗೆ 2 ಲಕ್ಷ ರೂ. ಘೋಷಣೆ ಮಾಡಿದ್ದೇನೆ ಎಂದರು.