ಹರಳೂರು ಶ್ರೀವಿರಭದ್ರಸ್ವಾಮಿ ರಥೋತ್ಸವ

weee
Published on

ತುಮಕೂರು: ತಾಲೂಕಿನ ಇತಿಹಾಸ ಪ್ರಸಿದ್ದ ಹರಳೂರು ಶ್ರೀವಿರಭದ್ರಸ್ವಾಮಿ ರಥೋತ್ಸವ ಗುರುವಾರ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

ಶ್ರೀವಿರಭದ್ರಸ್ವಾಮಿ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯವಾಗಿದ್ದು 500ಕ್ಕೂ ಹೆಚ್ಚು ವರ್ಷಗಳ ಕಾಲದ ಇತಿಹಾಸ ಹೊಂದಿದೆ,

ಪ್ರತಿವರ್ಷಯುಗಾದಿ ಮುಗಿದ 15 ದಿನಕ್ಕೆ ಆರಂಭವಾಗುವ ಶ್ರೀವಿರಭದ್ರಸ್ವಾಮಿ ಜಾತ್ರಾ ಮಹೋತ್ಸವ, ಸುಮಾರು ಒಂದು ವಾರಗಳ ನಡೆಯುವುದು ವಿಶೇಷ ಎನ್ನಿಸಿದೆ.

ರಥೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆಯಿಂದಲೇ ರಥ ಹೋಮ, ರಥ ಪ್ರತಿಷ್ಠಾಪನೆ ನಡೆದು, ಮಧ್ಯಾಹ್ನಒಂದುಗಂಟೆಯ ವೇಳೆಗೆ ಹರಳೂರು ಗ್ರಾಮಸ್ಥರು ಹಾಗೂ ಭಕ್ತಾಧಿಗಳ ಸಮ್ಮುಖದಲ್ಲಿ ಮಹಾ ರಥೋತ್ಸವ ನಡೆಯಿತು.ಸರ್ವಾಲಂಕೃತನಾದ ಶ್ರೀವಿರಭದ್ರಸ್ವಾಮಿಯ ಉತ್ಸವ ಮೂರ್ತಿ

ರಥೋತ್ಸವ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ರಾತ್ರಿ 7.30ಕ್ಕೆ ಗ್ರಾಮದ ಶ್ರೀವಿರಭದ್ರಸ್ವಾಮಿ ಕಲಾವೃಂದದಕಲಾವಿದರಿಂದ ಶನಿಪ್ರಭಾವ ಅಥವ ಾನಲ್ಲತಂಗಾದೇವಿ ಎಂಬ ಪೌರಾಣಿಕ ನಾಟಕದ ಪ್ರದರ್ಶನ ನಡೆಯಿತು. ರಥೋತ್ಸವದ ನಂತರ ಶ್ರೀವಿರಭದ್ರಸ್ವಾಮಿಗೆ ಧೂಳೋತ್ಸವ, ಪುಷ್ಪಾಲಂಕಾರ, ಪಾನಕ ಸೇವೆ ನಡೆಯಿತು. ರಾತ್ರಿ 8.30ಕ್ಕೆ ಸಿಂಹ ವಾಹನೋತ್ಸವ, ನವಿಲು ವಾಹನ, ಬೆಳ್ಳಿ ಪಲ್ಲಕ್ಕಿ ಉತ್ಸವ, ನಂದಿವಾಹನ ಸೇವೆಗಳು ನೆರವ್ಭೆರಿಸುವ ಮೂಲಕ ರಥೋತ್ಸವದ ಕಾರ್ಯಕ್ರಮ ಮುಕ್ತಾಯಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net