

ತುಮಕೂರು: ಕೈಮಗ್ಗ ಮತ್ತು ಜವಳಿ ಇಲಾಖೆ ಕೈಮಗ್ಗ ನೇಯ್ಗೆ ವೃತ್ತಿಯಲ್ಲಿ ನೈಪುಣ್ಯತೆ, ಶ್ರೇಷ್ಠತೆ, ತಾಂತ್ರಿಕತೆ, ಉತ್ಕೃಷ್ಟತೆಯ ಉತ್ಪನ್ನ ತಯಾರಿಸಿದ ಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ.
ಕೈಮಗ್ಗ ನೇಯ್ಗೆಯ ಅಸಾಧಾರಣ ಕೌಶಲ್ಯದಲ್ಲಿ ಸುಮಾರು ಕನಿಷ್ಠ 30 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿಯೊಂದಿಗೆ ಸೀರೆ ಉತ್ಪನ್ನದ ಮಾದರಿ, ಬಣ್ಣದ ಛಾಯಾಚಿತ್ರ, ಹಾಗೂ ವಿವಿಧ ಹಂತದ ವಿಡಿಯೋ ಲಗತ್ತಿಸಿ ಮೇ 31ರೊಳಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ತುಮಕೂರು. ಇವರಿಗೆ ಸಲ್ಲಿಸಬಹುದು. ಮಾಹಿತಿಗೆ ದೂ.0816 2275370 ಸಂಪರ್ಕಿಸಿ.