ಹಂದನಕೆರೆ ಮಾರ್ಗದಲ್ಲಿ ಬಸ್​ ಸೌಲಭ್ಯ ಕೊಡಿ

Rmgm-Ph-01-Bus - KSRTc - Thade-Doddagangawadi Students Rmgm Taluk -30-8-23
Published on

ಹಂದನಕೆರೆ: ತುಮಕೂರು ಜಿಲ್ಲೆಯ ಗಡಿ ಭಾಗದಲ್ಲಿರುವ ಹಂದನಕೆರೆ ಹೋಬಳಿ ಕೇಂದ್ರದಿಂದ ಜಿಲ್ಲಾ ಕೇಂದ್ರ ತುಮಕೂರಿಗೆ ಸಂಚರಿಸಲು ಬೆಳಗ್ಗೆ 7.30ರ ನಂತರ ಬಸ್​ ಸೌಕರ್ಯವಿಲ್ಲದೆ ಈ ಭಾಗದ ಜನರು ಪರದಾಡುವಂತಾಗಿದೆ.

ನೆರೆಯ ಹಾಸನ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಹಂದನಕೆರೆ ತುಮಕೂರಿನಿಂದ ಬರೋಬ್ಬರಿ 110ಕಿಮೀ ದೂರದಲ್ಲಿದ್ದು ಈ ಭಾಗದಲ್ಲಿ ಬಸ್​ ಸೌಲಭ್ಯ ನೀಡುವಂತೆ ಕೆಎಸ್​ಆರ್​ಟಿಸಿ ವಿಭಾಗಾಧಿಕಾರಿಗೆ ಸಾಕಷ್ಟು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಪನ್ಮೂಲ ಕ್ರೂಢಿಕರಣದ ನಂತರ ಈ ಬಗ್ಗೆ ಕ್ರಮಕೈಗೊಳ್ಳುತ್ತೇವೆ ಎಂಬ ಉತ್ತರ ಕೇಳಿ ಸಾಕಾಗಿದೆ ಎನ್ನುತ್ತಾರೆ ಸ್ಥಳಿಯರು.

ಹಂದನಕೆರೆ ಹೋಬಳಿ ಸೆಬ್ಬೇನಹಳ್ಳಿ ಮಾರ್ಗವಾಗಿ ಬೆಳಗ್ಗೆ 7ಕ್ಕೆ ಬರುವ ಬಸ್​ ಬಿಟ್ಟರೆ ಇನ್ನು ದಿನಪೂರ್ತಿ ಈ ಭಾಗದಿಂದ ಜಿಲ್ಲಾ ಕೇಂದ್ರಕ್ಕೆ ನೇರವಾಗಿ ಬಸ್​ ಸೌಲಭ್ಯವಿಲ್ಲ. ತಾಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ, ತಿಪಟೂರು ಅಥವಾ ಹುಳಿಯಾರು ತಲುಪಿ ಅಲ್ಲಿಂದ ಬೇರೊಂದು ಬಸ್​ನಲ್ಲಿ ಪ್ರಯಾಣಿಸುವ ಸ್ಥಿತಿಯಿದೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಿಂದ ಬೆಂಗಳೂರಿಗೆ ಪ್ರತಿದಿನ ನೂರಾರು ಬಸ್​ಗಳು ಬೆಂಗಳೂರಿಗೆ ತೆರಳುತ್ತವೆ, ಈ ಬಸ್​ಗಳ ಪೈಕಿ ಮೂರು, ನಾಲ್ಕು ಬಸ್​ಗಳನ್ನಾದರೂ ಗವಿರಂಗಾಪುರಬೆಟ್ಟ ಮಾರ್ಗವಾಗಿ ಹಂದನಕೆರೆ, ಮತಿಟ್ಟ ಮೂಲಕ ಚಿಕ್ಕನಾಯಕನಹಳ್ಳಿಗೆ ಸಂಪರ್ಕ ಕಲ್ಪಿಸಲು ಕೆಎಸ್​ಆರ್​ಟಿಸಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಯಕ್ಷಪ್ರಶ್ನೆ ಎನ್ನಿಸಿದೆ.

ಮಧ್ಯಾಹ್ನ 3.30ಕ್ಕೆ ಚಿ.ನಾ.ಹಳ್ಳಿಗೆ ಬರುವ ತುಮಕೂರು 1ನೇ ಟಕ ಓಡಿಸುತ್ತಿರುವ ಬೆಂಗಳೂರು&ಹೊಸದುರ್ಗ ಬಸ್​, ಮಧ್ಯಾಹ್ನ 2.15ಕ್ಕೆ ಬರುವ ಬೆಂಗಳೂರು&ಹೊಸದುರ್ಗ&ಉಕ್ಕಡಗಾತ್ರಿ ಬಸ್​ ಹಾಗೂ ಕುಣಿಗಲ್​ ಡಿಪೋ ಓಡಿಸುತ್ತಿರುವ ಬಸ್​ಗಳನ್ನು ಹುಳಿಯಾರು ಮಾರ್ಗದ ಬದಲಾಗಿ ಹಂದನಕೆರೆ&ಗವಿರಂಗನಾಥಪುರ ಕ್ಷೇತ್ರದ ಮಾರ್ಗವಾಗಿ ಓಡಿಸಿದರೆ ಅನುಕೂಲವಾಗಲಿದ್ದು ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಪುಟ್ಟಯ್ಯಸ್ಥಳಿಯರು, ಹಂದನಕೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net