ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಕೈಕೊಟ್ಟ ಲಿಫ್ಟ್​

KMT LIFT
Published on

ತುಮಕೂರು: ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಲಿಫ್ಟ್ ಕೈಕೊಟ್ಟು ಮೂವರು ಕಾಲೇಜು ವಿದ್ಯಾರ್ಥಿಗಳು ಕೆಲಕಾಲ ಪರದಾಡಿದ ಟನೆ ಶುಕ್ರವಾರ ನಡೆದಿದೆ.

ಕಾಲೇಜು ವಿದ್ಯಾರ್ಥಿಗಳಾದ ದಿಗಂತ (16), ಮೊಹಮ್ಮದ್​ (17), ಜೀವನ್​ (16) ಅರ್ಧಗಂತೆಗೂ ಹೆಚ್ಚು ಕಾಲ ಲಿಫ್ಟ್​ ನಲ್ಲಿ ಸಿಲುಕಿದ್ದರಿಂದ ನೂರಾರು ವಿದ್ಯಾರ್ಥಿಗಳು ಸ್ಥಳದಲ್ಲಿ ಜಮಾಯಿಸಿದ್ದರು.

ಸುದ್ದಿ ತಿಳಿದ ಅಗ್ನಿಶಾಮಕದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಲಿಫ್ಟ್​ ನಲ್ಲಿ ಸಿಲುಕಿದ ಮೂವರು ವಿದ್ಯಾರ್ಥಿಗಳ ರಕ್ಷಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net