ನವೋದಯ ಅರ್ಹತಾ ಪರೀಕ್ಷೆಗೆ ಮಾರ್ಗದರ್ಶನ

JNV
Published on

ತುಮಕೂರು: ನವೋದಯ ಶಾಲೆ 6ನೇ ತರಗತಿ ಪ್ರವೇಶಕ್ಕೆ ಅರ್ಹತಾ ಪರೀಕ್ಷೆ 2024 ಜನವರಿಯಲ್ಲಿ ರಾಷ್ಟç ಮಟ್ಟದ ಪ್ರವೇಶ ಪರೀಕ್ಷೆ ನಡೆಯಲಿದೆ. ಪರೀಕ್ಷಾರ್ಥಿಗಳು ತಯಾರಿಗೆ ತುಮಕೂರಿನ ವಿಜ್ಞಾನ ಬಿಂದು ಸಂಸ್ಥೆ ಉಚಿತ ಮಾರ್ಗದರ್ಶನ ನೀಡುತ್ತಿದೆ.

ಪ್ರವೇಶ ಪರೀಕ್ಷೆ ನಿಗದಿತ ಪಠ್ಯಕ್ರಮ, ಸೂಚಿತ ಪರೀಕ್ಷಾ ಕ್ರಮ, ಮಾದರಿ ಪ್ರಶ್ನೆಗಳು, ಪರೀಕ್ಷಾ ಕೌಶಲ್ಯಗಳು, ಉತ್ತರ ಬರೆಯಲು ಸಮಯ ನಿರ್ವಹಣೆ ಕುರಿತು ಪರೀಕ್ಷಾರ್ಥಿಗಳಿಗೆ ಮಾಕ್ ಪರೀಕ್ಷೆ ಹಮ್ಮಿಕೊಂಡಿದೆ.

ಸೆಪ್ಟೆಂಬರ್ 3 ರಂದು ಬೆಳಗ್ಗೆ 9ರಿಂದ 11ರ ವರೆಗೆ ನವೋದಯ ಮಾಕ್ ಪರೀಕ್ಷೆ ನಡೆಯಲಿದೆ. ಪ್ರವೇಶ ಪರೀಕ್ಷೆ ಪೂರಕವಾದ ಗಣಿತ, ಬುದ್ಧಿ ಸಾಮರ್ಥ್ಯ, ಭಾಷೆಯಲ್ಲಿ ಪರೀಕ್ಷಾರ್ಥಿಗಳು ಹೊಂದಿರಬೇಕಾದ ಕಲಿಕಾ ಕೌಶಲ್ಯಗಳು, ಪರೀಕ್ಷಾ ಸಿದ್ಧತೆಗೆ ನಡೆಸಬೇಕಾಗಿರುವ ಅಭ್ಯಾಸ ಕ್ರಮ ಕುರಿತು ಪೋಷಕರಿಗೂ ಮಾರ್ಗದರ್ಶನ ನೀಡಲಾಗುತ್ತಿದೆ.

ಪರೀಕ್ಷೆಗೆ ಅರ್ಜಿ ಸಲ್ಲಿಸಲಿರುವ 5ನೇ ತರಗತಿ ವಿದ್ಯಾರ್ಥಿಗಳು ಮತ್ತು ಮುಂದಿನ ವರ್ಷ ಅರ್ಜಿ ಸಲ್ಲಿಸಲು ಆಸಕ್ತಿಯಿರುವ 4ನೇ ತರಗತಿ ವಿದ್ಯಾರ್ಥಿಗಳು ಮಾಕ್ ಪರೀಕ್ಷೆಯಲ್ಲಿ ಭಾಗವಹಿಸಬಹುದು. ಮಾಹಿತಿಗೆ ಎಸ್.ರವಿಶಂಕರ್ ವಿಜ್ಞಾನ ಬಿಂದು ಸಂಸ್ಥೆ, ಉಪ್ಪಾರಹಳ್ಳಿ, ತುಮಕೂರು. ಮೊ.86605 87150 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net