

ತುಮಕೂರು: ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಪ್ರತಿಭಟನೆ 30ನೇ ದಿನಕ್ಕೆ ಕಾಲಿಟ್ಟಿದ್ದು ಗುರುವಾರ ಕೂಡ ಸಂವಿಧಾನ ಪೀಠಿಕೆ ಓದುವುದರ ಮೂಲಕ ವಿನೂತನವಾಗಿ ಧರಣಿ ಮುಂದುವರಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೇರಿದ್ದ ನೂರಾರು ಅತಿಥಿ ಉಪನ್ಯಾಸಕರು ಸಂವಿಧಾನ ಪೀಠಿಕೆ ಓದುವುದರ ಮೂಲಕ ಸಂವಿಧಾನಬದ್ಧ ಬೇಡಿಕೆಯನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಡಾ.ಕೆ.ಎಚ್.ಧರ್ಮವೀರ ಮಾತನಾಡಿ, ಸಂವಿಧಾನ ಬದ್ಧವಾದ ನಮ್ಮ ಹಕ್ಕನ್ನು ನಾವು ಕೇಳುತ್ತಿz್ದೆÃವೆ, ನಮ್ಮ ಸೇವೆಯನ್ನು ಖಾಯಮಾತಿ ಮಾಡಿ ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರಾದ ಡಾ.ಕುಮಾರ್, ಡಾ.ಶಿವಣ್ಣ ತಿಮ್ಲಾಪುರ, ಮಲ್ಲಿಕಾರ್ಜುನ್, ಹನುಮಂತರಾಯಪ್ಪ, ಮನು, ಕೆ.ಆರ್.ಅಂಬಿಕಾ, ಸವಿತ, ವಿನೂತಾ, ಗಿರಿಜಮ್ಮ, ಶಂಕರ, ಗಿರೀಶ್, ನಟರಾಜು, ಶಶಿಧರ್, ಗುಂಡಣ್ಣ, ಕಾಂತರಾಜು, ಶಶಿಕುಮಾರ್, ಗಿರೀಶ್‌ಕುಮಾರ್ ಮತ್ತಿತರರು ಇದ್ದರು.