ತುಮಕೂರಿನಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಫರ್ಧಿಸಬಹುದು; ಸಂಸದ ಜಿ.ಎಸ್.ಬಸವರಾಜು

GSB_SOMANNA
Published on

ತುಮಕೂರು: ತುಮಕೂರು ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಕೂಡ ಸ್ಫರ್ಧಿಸುವ ಸಾಧ್ಯತೆಯಿದೆ, ಜಿಲ್ಲೆಯಲ್ಲಿ ದೇವೇಗೌಡರಿಗೆ ಅವರದ್ದೇ ಆದ ಶಕ್ತಿಯಿದೆ, ಅವರೂ ಚಾಣಾಕ್ಷರಿದ್ದಾರೆ ಎಂದು ಹೇಳಿಕೆ ನೀಡುವ ಸಂಸದ ಜಿ.ಎಸ್.ಬಸವರಾಜು ಕುತೂಹಲ ಹುಟ್ಟುಹಾಕಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ವಿ.ಸೋಮಣ್ಣ ರಾಜ್ಯಸಭೆ ಸದಸ್ಯರನ್ನಾಗಿ ಮಾಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ ಆದರೆ, ಅವರನ್ನು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಸುವಂತೆ ನಾನು ಮನವಿ ಮಾಡಿದ್ದೇನೆ. ಈಗ ಸೋಮಣ್ಣ ತುಮಕೂರಿಗೆ ಬಂದರೆ ಗೆಲ್ಲುತ್ತಾರೆ, ಆದರೆ, ಮಾಧುಸ್ವಾಮಿ ಗೆಲುವು ಹೇಳೊದಕ್ಕಾಗಲ್ಲ ಎಂದರು.

ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಸೋಮಣ್ಣ ನನ್ನ ಸಲಹೆ ಕೇಳಿದ್ದಾರೆ, ತುಮಕೂರು ಬಿಜೆಪಿ ಪರವಾಗಿದೆ, ಯಾರೇ ನಿಂತರೂ ಗೆಲ್ಲುತ್ತಾರೆ, ರಾಜಕೀಯ ಇಚ್ಛಾಶಕ್ತಿ ಹಾಗೂ ಹೈಕಮಾಂಡ್ ಬೆಂಬಲ ಬೇಕಷ್ಟೇ ಎಂದು ಹೇಳಿದ್ದೇನೆ ಎಂದರು.

ಯಾರಿಗೆ ಟಿಕೆಟ್ ಕೊಟ್ಟರೂ ಬಿಜೆಪಿಗೆ ಬೆಂಬಲಿಸುತ್ತೇನೆ ಆದರೆ, ಮಾಧುಸ್ವಾಮಿ ಸ್ಫರ್ಧೆ ಬಗ್ಗೆ ವರಿಷ್ಠರೊಂದಿಗೆ ಮಾತನಾಡುತ್ತೇನೆ ಎಂದರು.

ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಮಾತನಾಡಲು ಗೃಹ ಸಚಿವ ಅಮಿತ್‌ಶಾ ಅವರ ಸಮಯ ಕೇಳಿದ್ದೇನೆ ಅವರು ಅರ್ಧ ಗಂಟೆ ಭೇಟಿಗೆ ಸಮಯ 20 ನಿಮಿಷ ಮಾತನಾಡೊಣ ಎಂದು ಹೇಳಿದ್ದಾರೆ, ಈ ಸಂದರ್ಭದಲ್ಲಿ ತುಮಕೂರು ಕ್ಷೇತ್ರದ ಬಗ್ಗೆ ಮಾತನಾಡುತ್ತೇನೆ ಎಂದರು.

ತುಮಕೂರು ಜಿಲ್ಲೆಗೆ ರಕ್ತ ಕೊಟ್ರು ಕೊಡ್ತೇನೆ ನೀರು ಕೊಡಲ್ಲ ಎಂದು ದೇವೇಗೌಡರು ಹೇಳಿದ್ದರು ಇದೇ ಟ್ರಂಪ್‌ಕಾರ್ಡ್ಗಳನ್ನು 2019ರ ಚುನಾವಣೆಯಲ್ಲಿ ಒಕ್ಕಲಿಗರ ಮನೆ ಬಾಗಿಲಿಗೆ ಅಂಟಿಸಿದೆ, ಎಲ್ಲರೂ ಓದಿಕೊಂಡು ಬಿಜೆಪಿಗೆ ಮತ ನೀಡಿದರು,

ತುಮಕೂರಿನಲ್ಲಿ ಕತ್ತೆ ನಿಲ್ಲಿಸಿದರೂ ಮೋದಿ ನೋಡಿ ಜನ ಓಟು ಹಾಕುತ್ತಾರೆ ಆದರೆ, ದುರಂಹಕಾರಿಗಳು ಸೋಲಬಹುದಷ್ಟೇ ಎಂದು ಮಾರ್ಮಿಕವಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net